ಸರಿಯಾಗಿ ಪರೀಕ್ಷಣೆ ಮುಗಿದಿರುವ ಕೋವಿಶೀಲ್ಡ್ ಲಸಿಕೆ ನೀಡಿ, ನಮಗೆ ಕೊವ್ಯಾಕ್ಸಿನ್ ಬೇಡ: ದಿಲ್ಲಿ ವೈದ್ಯರ ಹೇಳಿಕೆ

Update: 2021-01-16 12:17 GMT

ಹೊಸದಿಲ್ಲಿ,ಜ.16: ದೇಶಾದ್ಯಂತ ಕೋವಿಡ್ ಲಸಿಕೆ ಆರಂಭಗೊಂಡ ದಿನದಂದೇ ದಿಲ್ಲಿಯ ಪ್ರತಿಷ್ಠಿತ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ರೆಸಿಡೆಂಟ್ ವೈದ್ಯರು ಆಸ್ಪತ್ರೆಯ ಸುಪರಿಂಟೆಂಡೆಂಟ್ ಗೆ ಪತ್ರ ಬರೆದು ತಮಗೆ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಲಸಿಕೆ ಬೇಡ ಬದಲು ಸೀರಂ ಇನ್‍ಸ್ಟಿಟ್ಯೂಟ್‍ನ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳಲು ತಾವು ಬಯಸಿದ್ದಾಗಿ ಹೇಳಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್‍ಗಳು ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಅದನ್ನು ಹಾಕಿಸಿಕೊಳ್ಳಲು ತಮಗೆ ಆತಂಕವಿದೆ ಎಂದೂ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ತನ್ನ ಪತ್ರದಲ್ಲಿ ಹೇಳಿದೆ. ಆದುದರಿಂದ ವೈದ್ಯರು ತಮಗೆ ಸಂಪೂರ್ಣ ಟ್ರಯಲ್ ಮುಗಿಸಿರುವ ಕೋವಿಶೀಲ್ಡ್ ನೀಡಬೇಕೆಂದು ಬಯಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ನಡುವೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎ.ಕೆ ಸಿಂಗ್ ರಾಣಾ ಅವರು ಇಂದು ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News