ಸಂಗೀತೋತ್ಸವ, ಕ್ರೀಡೆ ಕಾರ್ಯಕ್ರಮ ಮೂಲಕ ಕಾಶ್ಮೀರಿ ಯುವಜನರೊಂದಿಗೆ ತೊಡಗಿಕೊಳ್ಳಲು ಸೇನೆಯ ಯೋಜನೆ

Update: 2021-01-21 19:04 GMT

ಹೊಸದಿಲ್ಲಿ,ಜ.21: ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ಮುಂದುವರಿದಿದ್ದರೂ ಭಾರತೀಯ ಸೇನೆಯು ಯುವ ಕಾಶ್ಮೀರಿಗಳನ್ನು ,ವಿಶೇಷವಾಗಿ ಕಣಿವೆಯ ದಕ್ಷಿಣ ಭಾಗದವರನ್ನು ಸಂಗೀತೋತ್ಸವಗಳು,ಕ್ರೀಡಾ ಕಾರ್ಯಕ್ರಮಗಳಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಲು ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಅವರನ್ನು ತಲುಪುವ ತನ್ನ ಪ್ರಯತ್ನಗಳನ್ನು ಹೆಚ್ಚಿಸುತ್ತಿದೆ.

ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಒಟ್ಟು 126 ಸಕ್ರಿಯ ಭಯೋತ್ಪಾದಕರಿದ್ದಾರೆ ಎಂದು ರಕ್ಷಣಾ ಇಲಾಖೆಯಲ್ಲಿನ ಮೂಲಗಳು ತಿಳಿಸಿವೆ. 2020ರಲ್ಲಿ ಭಯೋತ್ಪಾದಕ ಗುಂಪುಗಳು ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ಭರ್ತಿ ಮಾಡಿಕೊಂಡಿದ್ದು, ಇದನ್ನು ತಡೆಯುವುದು ಸೇನೆಯ ಮುಖ್ಯ ಉದ್ದೇಶವಾಗಿದೆ ಎಂದು ಈ ಮೂಲಗಳು ತಿಳಿಸಿವೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಮೇ.ಜ.ರಾಷಿಮ್ ಬಾಲಿ ನೇತೃತ್ವದ ಸೇನೆಯ ವಿಕ್ಟರ್ ಫೋರ್ಸ್ ದ.ಕಾಶ್ಮೀರದಲ್ಲಿ ಕಾರ್ಯಾಚರಣೆಗಳ ನಿಯಂತ್ರಣವನ್ನು ಹೊಂದಿದ್ದು,ಆಗಿನಿಂದ ಒಟ್ಟು 35 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. 15 ಜನರನ್ನು ಬಂಧಿಸಲಾಗಿದ್ದು,ಆರು ಜನರು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ.

ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡವರು ಶರಣಾಗತರಾಗಲು ಮತ್ತು ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಅವಕಾಶವನ್ನು ಕಲ್ಪಿಸುವುದು ಸೇನೆಯ ಮತ್ತೊಂದು ಆದ್ಯತೆಯಾಗಿದೆ ಎಂದೂ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News