ಓದಿನ ಹವ್ಯಾಸದಿಂದ ಅನುಭವದ ಜಗತ್ತು ವಿಸ್ತರಿಸುತ್ತದೆ: ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ

Update: 2021-01-23 18:07 GMT

ಬೆಂಗಳೂರು, ಜ.23: ಓದಿನ ಹವ್ಯಾಸದಿಂದ ನಮ್ಮ ಅನುಭವಗಳ ಜಗತ್ತು ವಿಸ್ತಾರವಾಗುತ್ತದೆ. ನಾನು ಬಾಲ್ಯದಿಂದ ರೂಢಿಸಿಕೊಂಡ ಓದಿನ ಹವ್ಯಾಸದಿಂದಾಗಿ ವಿಭಿನ್ನವಾದ ಅನುಭವಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಿಸಿದ್ದಾರೆ.

ಶನಿವಾರ ಸಪ್ನ ಬುಕ್‍ಹೌಸ್ 54 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ‘ವಾರ್ಷಿಕೋತ್ಸವ’ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುಸ್ತಕ ಓದುವುದರಿಂದ ಅಪರಿಚಿತ ಜಗತ್ತು, ಅಲ್ಲಿನ ವ್ಯಕ್ತಿಗಳು, ಜ್ಞಾನ, ವಿಚಾರಗಳು ಪರಿಚಯವಾಗುತ್ತವೆ ಎಂದು ತಿಳಿಸಿದ್ದಾರೆ.

ನಾನು ಬಾಲ್ಯದಿಂದಲೂ ಓದಿನ ಹವ್ಯಾಸವನ್ನು ರೂಢಿಸಿಕೊಂಡಿದ್ದೇನೆ. ಸಾಹಿತ್ಯದ ಜತೆ ವಿಮರ್ಶೆಗಳನ್ನು ಓದುತ್ತೇನೆ. ಇದರಿಂದ ವಸ್ತುವಿಷಯ, ಸತ್ಯ, ಸಾಹಿತ್ಯ, ವಿಚಾರಗಳು ಅರ್ಥವಾಗುತ್ತವೆ. ಅಲ್ಲದೇ ಸಿನಿಮಾ, ನಾಟಕ, ವಿಮರ್ಶೆ ಮುಂತಾದವುಗಳಿಂದ ತಿಳಿದುಕೊಳ್ಳುವುದು ಹಾಗೂ ಅನುಭವ ಜಗತ್ತನ್ನು ವಿಸ್ತರಿಸಿಕೊಳ್ಳುವುದು ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.

ಹಿರಿಯ ಕವಿ ಡಾ. ದೊಡ್ಡರಂಗೇಗೌಡ, ಹಿರಿಯ ಪತ್ರಕರ್ತ ಗಿರೀಶ್ ಹತ್ವಾರ್ ಮಾತನಾಡಿದರು. ಈ ವೇಳೆ ರಾ.ನಂ. ಚಂದ್ರಶೇಖರ್, ಸಿದ್ಧಲಿಂಗಯ್ಯ, ಕಲಾವಿದೆ ರಂಜನಿ ರಾಘವನ್ ಸೇರಿದಂತೆ ಹಲವು ಲೇಖಕರ ಜತೆಯಲ್ಲಿ ಸಂವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News