ಕೊರೋನ: 2009ರ ಬಿಕ್ಕಟ್ಟಿಗಿಂತ 4 ಪಟ್ಟು ಉದ್ಯೋಗ ನಷ್ಟ

Update: 2021-01-25 18:59 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 25: ಕಳೆದ ವರ್ಷ ಕೊರೋನ ವೈರಸ್ ಸಾಂಕ್ರಾಮಿಕವು ಜಾಗತಿಕ ಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗನಷ್ಟಕ್ಕೆ ಕಾರಣವಾಯಿತು ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.

2020ರಲ್ಲಿ ಒಟ್ಟು ಜಾಗತಿಕ ಕೆಲಸದ ಗಂಟೆಗಳ ಪೈಕಿ 8.8 ಶೇಕಡ ನಷ್ಟವಾಯಿತು ಎಂದು ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹೊಸ ಅಧ್ಯಯನವೊಂದರಲ್ಲಿ ತಿಳಿಸಿದೆ.

‘‘ಅಂದರೆ, 25.5 ಕೋಟಿ ಪೂರ್ಣಕಾಲಿಕ ಕೆಲಸಗಳು ನಷ್ಟವಾಗಿವೆ. ಇದು 2009ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ನಷ್ಟವಾದ ಉದ್ಯೋಗಗಳಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ’’ ಎಂದು ಐಎಲ್‌ಒ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News