ರೈತರನ್ನು ತಡೆಯಲು ಶತಪ್ರಯತ್ನ ನಡೆಸುತ್ತಿರುವ ಸರಕಾರ: 'ಅಹಂಕಾರದ ಮಹಾಗೋಡೆ ಕಟ್ಟಲಾಗಿದೆ' ಎಂದ ನೆಟ್ಟಿಗರು

Update: 2021-02-02 08:15 GMT

ಹೊಸದಿಲ್ಲಿ,ಫೆ.2: ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಹಲವಾರು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಾದ ಸಿಂಘು, ಟಿಕ್ರಿ ಹಾಗೂ ಗಾಝಿಪುರಕ್ಕೆ ಇನ್ನೂ ಹಲವು ರೈತರು ಆಗಮಿಸುವುದನ್ನು ತಡೆಯಲು ಪೊಲೀಸರು ನೆಲದಲ್ಲಿ ಮುಳ್ಳುಗಳು, ತಡೆಗೋಡೆಗಳು, ಕಾಂಕ್ರೀಟ್ ಬ್ಲಾಕ್, ಮುಳ್ಳಿನ ಬೇಲಿ ಮುಂತಾದವುಗಳನ್ನು ಅಳವಡಿಸಿದ್ದಾರೆ. ರೈತರ ವಿರುದ್ಧ ಪೊಲೀಸರ ಈ ಕ್ರಮಕ್ಕೆ ಇದೀಗ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

"ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್‍ ಗಾಂಧಿ ಚಿತ್ರಗಳ ಸಮೇತ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ. "ಮುಳ್ಳುಗಳು, ಮೊಳೆಗಳು, ತಡೆಗೋಡೆಗಳು, ವೈರ್ ಗಳು, ಇಂಟರ್ನೆಟ್ ಸ್ಥಗಿತ ಇವೆಲ್ಲವನ್ನೂ ನಮಗೆ ಆಹಾರ ನೀಡುವ ಅನ್ನದಾತರ ಮೇಲೆ ಪ್ರಯೋಗಿಸಲಾಗುತ್ತಿದೆ. ಕೇವಲ ಅವರು ಧ್ವನಿಯೆತ್ತಿದ್ದಕ್ಕಾಗಿ" ಎಂದು ಪತ್ರಕರ್ತೆ ಸಾಗರಿಕಾ ಘೋಷ್ ಹೇಳಿಕೆ ನೀಡಿದ್ದಾರೆ.

"ನಾವು ಇಂತಹಾ ಭದ್ರತೆಯನ್ನು ಚೀನಾ ಆಕ್ರಮಣ ಮಾಡಿಕೊಂಡಿರುವ ಅರುಣಾಚಲ ಪ್ರದೇಶದಲ್ಲಿ ಇರಬೇಕೆಂದು ಬಯಸುತ್ತೇವೆ. ನಮ್ಮ ದೇಶದ ರೈತರ ವಿರುದ್ಧವಲ್ಲ ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ.  ಈ ಪ್ರಕರಣದ ಕುರಿತಾದಂತೆ '#ಫೆನ್ಸಿಂಗ್ ಲೈಕ್ ಚೀನಾಪಾಕ್' ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News