ಇರಾನ್ ರಾಜತಾಂತ್ರಿಕನಿಗೆ ಐರೋಪ್ಯ ಒಕ್ಕೂಟದಲ್ಲಿ ಜೈಲು

Update: 2021-02-04 19:23 GMT

ಬ್ರಸೆಲ್ಸ್ (ಬೆಲ್ಜಿಯಮ್), ಫೆ. 4: ಇರಾನ್‌ನ ದೇಶಭ್ರಷ್ಟ ಪ್ರತಿಪಕ್ಷ ಗುಂಪೊಂದರ ಸಭೆಯ ಮೇಲೆ ಬಾಂಬ್ ದಾಳಿ ನಡೆಸಲು ಯೋಜನೆ ರೂಪಿಸಿರುವ ಆರೋಪ ಎದುರಿಸುತ್ತಿರುವ ಆ ದೇಶದ ರಾಜತಾಂತ್ರಿಕರೊಬ್ಬರಿಗೆ ಐರೋಪ್ಯ ಒಕ್ಕೂಟದ ನ್ಯಾಯಾಲಯವೊಂದು ಗುರುವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2018ರ ಜೂನ್‌ನಲ್ಲಿ ಪ್ಯಾರಿಸ್ ಸಮೀಪ ನಡೆದ ನ್ಯಾಶನಲ್ ಕೌನ್ಸಿಲ್ ಆಫ್ ರೆಸಿಸ್ಟೆನ್ಸ್ ಆಫ್ ಇರಾನ್ ಏರ್ಪಡಿಸಿದ್ದ ಪ್ರತಿಭಟನಾ ರ್ಯಾಲಿಯ ಮೇಲೆ ಬಾಂಬ್ ದಾಳಿ ನಡೆಸಲು ವಿಯೆನ್ನಾದಲ್ಲಿ ನೆಲೆಸಿದ್ದ ರಾಜತಾಂತ್ರಿಕ ಅಸಾದುಲ್ಲಾ ಅಸ್ಸಾದಿ ಸಂಚು ರೂಪಿಸಿದ್ದರು ಎಂದು ಬೆಲ್ಜಿಯಮ್ ಪ್ರಾಸಿಕ್ಯೂಶನ್ ವಕೀಲರು ಹೇಳಿದರು.

ಜರ್ಮನ್, ಫ್ರಾನ್ಸ್ ಮತ್ತು ಬೆಲ್ಜಿಯಮ್ ಪೊಲೀಸರು ದಾಳಿಯನ್ನು ವಿಫಲಗೊಳಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News