ಆಂಧ್ರ: ಕೊರೋನ ಲಸಿಕೆ ಪಡೆದ 2 ದಿನದ ಬಳಿಕ ಮಹಿಳೆ ಮೃತ್ಯು

Update: 2021-02-08 17:15 GMT

ವಿಶಾಖಪಟ್ಟಣಂ, ಫೆ.8: ಕೊರೋನ ಲಸಿಕೆ ಪಡೆದ 29 ವರ್ಷದ ಸ್ವಯಂಸೇವಕಿ 2 ದಿನದ ಬಳಿಕ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ರೆಂಟಿಕೋಟ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಲಲಿತಾ ಎಂಬವರು ಮೃತಪಟ್ಟಿದ್ದು, ಲಸಿಕೆ ಪಡೆದಿರುವುದು ಆಕೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ಶನಿವಾರ ತೀವ್ರ ಜ್ವರ ಬಾಧಿಸಿದ್ದರಿಂದ ಲಲಿತಾರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ ಕೆಸಿ ನಾಯಕ್ ‘ಫೆ.5ರಂದು ಲಸಿಕೆ ಪಡೆದಿದ್ದ ಲಲಿತಾ, 5 ಮತ್ತು 6ರಂದು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದ್ದರಿಂದ ಅವರ ಮರಣಕ್ಕೆ ನಿಖರ ಕಾರಣವನ್ನು ಈಗಲೇ ಹೇಳಲಾಗದು. ಅವರ ಜೊತೆಗೆ ಲಸಿಕೆ ತೆಗೆದುಕೊಂಡ ಇತರರು ಆರೋಗ್ಯವಾಗಿಯೇ ಇದ್ದಾರೆ’ ಎಂದು ಹೇಳಿದ್ದಾರೆ. ಲಲಿತಾರೊಂದಿಗೆ ಲಸಿಕೆ ತೆಗೆದುಕೊಂಡ ಎಲ್ಲರ ಮೇಲೂ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News