ನ್ಯೂಸ್‍ ಕ್ಲಿಕ್ ಕಚೇರಿ, ಮುಖ್ಯ ಸಂಪಾದಕರ ನಿವಾಸದ ಮೇಲೆ ಇಡಿ ದಾಳಿ

Update: 2021-02-09 10:42 GMT

ಹೊಸದಿಲ್ಲಿ: ಸುದ್ದಿ ತಾಣ ನ್ಯೂಸ್‍ಕ್ಲಿಕ್ ಕಚೇರಿ ಮೇಲೆ ಮಂಗಳವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನ್ಯೂಸ್ ಕ್ಲಿಕ್ ಸುದ್ದಿ ತಾಣದ ಮುಖ್ಯ ಸಂಪಾದಕ ಪ್ರಬಿರ್ ಪುಕ್ರ್ಯಸ್ತ ಅವರ ನಿವಾಸದ ಮೇಲೂ ದಾಳಿ ನಡೆದಿದೆ.

ಹಿರಿಯ ಪತ್ರಕರ್ತರಾಗಿರುವ ಪ್ರಬಿರ್ ಅವರು 2009ರಲ್ಲಿ ಆರಂಭಿಸಿದ ನ್ಯೂಸ್ ಕ್ಲಿಕ್ ತನ್ನ ವರದಿಗಳಲ್ಲಿ  ಮೋದಿ ಸರಕಾರದ  ಕಾರ್ಯವೈಖರಿ, ನೀತಿಗಳನ್ನು ಟೀಕಿಸುವಲ್ಲಿ  ಯಾವತ್ತೂ ಹಿಂಜರಿಕೆ ತೋರಿಲ್ಲ. ರೈತರ ಪ್ರತಿಭಟನೆಯ ವಿಚಾರಗಳ ಕುರಿತೂ ಅದು ವ್ಯಾಪಕವಾಗಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News