ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2021-02-10 16:35 GMT

ಬೆಂಗಳೂರು, ಫೆ.10: ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ, ಡಿಐಜಿ ದಿಲೀಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳೆಯೊಬ್ಬರು ಗೃಹ ಇಲಾಖೆಗೆ ದೂರು ನೀಡಿರುವುದಾಗಿ ಹೇಳಲಾಗುತ್ತಿದೆ.

ದಿಲೀಪ್ ಅವರು ಪ್ರಮುಖ ತನಿಖಾ ಸಂಸ್ಥೆವೊಂದರ ಡಿಐಜಿ ಆಗಿ ಅಧಿಕಾರ ವಹಿಸುವುದಕ್ಕೂ ಮುನ್ನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ.

ದೂರು ನೀಡಿರುವ ಮಹಿಳೆ ಬಿಜೆಪಿ ಪ್ರಭಾವಿ ಮುಖಂಡರೊಬ್ಬರ ಲಾಜೆಸ್ಟಿಕ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು, ಸಂತ್ರಸ್ತೆಗೆ ಹುಬ್ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಿಂದ ಅಧಿಕಾರಿ ಪರಿಚಯದಿಂದ ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಒಮ್ಮೆ ನನ್ನನ್ನು ಅವರು ಮನೆಗೆ ಆಹ್ವಾನಿಸಿ ತನ್ನನ್ನು ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ, ತನ್ನ ಮೊಬೈಲ್‍ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದರು. ತನ್ನ ಮಾತಿಗೆ ಒಪ್ಪಿಗೆ ನೀಡುವಂತೆ ಬೆದರಿಕೆ ಹಾಕಿದರು ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.

ನನಗೆ ಮಾತ್ರವಲ್ಲದೇ ಕಾರವಾರದ ಪೊಲೀಸ್ ಅಧಿಕಾರಿಯೊಬ್ಬಾಕೆ ಅವರೊಂದಿಗೂ ಇದೇ ರೀತಿ ನಡೆದುಕೊಂಡಿದ್ದಾರೆ. ಐಟಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುವ ಸ್ನೇಹಿತೆಯೊಂದಿಗೂ ಇದೇ ರೀತಿ ವರ್ತಿಸಿ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಕೆಲ ಮಾಹಿತಿ ಸಂಗ್ರಹಿಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಂಗಳೂರು ಎಸ್ಪಿ ಆಗಿದ್ದ ಸಂದರ್ಭದಲ್ಲೂ ಮಹಿಳೆಯೊಬ್ಬರ ಮೇಲೆ ಈ ಅಧಿಕಾರಿ ಅತ್ಯಾಚಾರವೆಸಗಿದ್ದಾರೆ. ಕಾರವಾರದಲ್ಲೂ ಮಹಿಳೆಯೊಬ್ಬರೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ಮಹಿಳೆ ಉಲ್ಲೇಖಿಸಿರುವುದಾಗಿ ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News