ಟರ್ಕಿಯಲ್ಲಿ ಭೀಕರ ಸುಂಟರಗಾಳಿ: ಆಕಾಶಕ್ಕೆ ಹಾರಿದ ವಾಹನಗಳು

Update: 2021-02-12 18:59 GMT

ಇಸ್ತಾಂಬುಲ್ (ಟರ್ಕಿ), ಫೆ. 12: ಟರ್ಕಿಯ ಪಶ್ಚಿಮ ಕರಾವಳಿ ರಾಜ್ಯ ಇಝ್ಮಿರ್‌ನ ಬಂದರು ಪ್ರದೇಶವೊಂದರಲ್ಲಿ ಗುರುವಾರ ರಾತ್ರಿ ಬೀಸಿದ ಪ್ರಬಲ ಸುಂಟರಗಾಳಿಯೊಂದು ಭಾರೀ ಪ್ರಮಾಣದಲ್ಲಿ ದಾಂಧಲೆ ನಡೆಸಿದೆ. ಸುಂಟರಗಾಳಿಯ ತೀವ್ರತೆ ಎಷ್ಟಿತ್ತೆಂದರೆ ಅದರ ದಾರಿಯಲ್ಲಿದ್ದ ವಾಹನಗಳು ಗಾಳಿಯಲ್ಲಿ ಹಾರಿದವು, ಒಂದು ಕ್ರೇನ್ ಬುಡಮೇಲಾಗಿ ಬಿತ್ತು ಹಾಗೂ ಹಲವಾರು ಕಟ್ಟಡಗಳು ಹಾನಿಗೀಡಾದವು ಎಂದು ಟರ್ಕಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಸುಂಟರ ಗಾಳಿಯ ಪ್ರಕೋಪಕ್ಕೆ 16 ಮಂದಿ ಗಾಯಗೊಂಡರು.

ರಭಸದ ಗಾಳಿಯು ದೋಣಿಗಳನ್ನು ಮಗುಚಿಹಾಕಿತು, ಮರಗಳನ್ನು ಬುಡಮೇಲುಗೊಳಿಸಿತು ಹಾಗೂ ಕಟ್ಟಡಗಳ ವಸ್ತುಗಳನ್ನು ಏಜಿಯನ್ ಸಮುದ್ರದ ಪ್ರವಾಸಿ ರಿಸಾರ್ಟ್ ತಾಣ ಸೆಸ್ಮೆಯ ಸುತ್ತಮುತ್ತಲಿನ ಸ್ಥಳಗಳಿಗೆ ಎಸೆದಿರುವುದನ್ನು ಇಹ್ಲಾಸ್ ಸುದ್ದಿ ಸಂಸ್ಥೆಯ ಡ್ರೋನ್ ಚಿತ್ರಿತ ವೀಡಿಯೊ ತುಣುಕೊಂದು ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News