ಸತತ 5ನೇ ದಿನ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

Update: 2021-02-13 10:24 GMT

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು(ಒಎಂಸಿ)ಸತತ 5ನೇ ದಿನ ಬೆಲೆ ಹೆಚ್ಚಿಸಿದ ಕಾರಣ ಶನಿವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆ ಎತ್ತರಕ್ಕೆ ಏರಿಕೆಯಾಗಿವೆ.

ಇಂಧನ ಚಿಲ್ಲರೆ ವ್ಯಾಪಾರಿಗಳ ಅಧಿಸೂಚನೆ ಪ್ರಕಾರ ಪೆಟ್ರೋಲ್ ದರ ದಿಲ್ಲಿಯಲ್ಲಿ 30 ಪೈಸೆ ಹೆಚ್ಚಳವಾಗಿ ಪ್ರತಿ ಲೀ.ಗೆ 88.44 ರೂ. ತಲುಪಿದರೆ, ಡೀಸೆಲ್ ಬೆಲೆ 36 ಪೈಸೆ ಏರಿಕೆಯಾಗಿ 78.74 ರೂ.ಗೆ ತಲುಪಿದೆ. 

ಹೊಸ ಪರಿಷ್ಕೃತ ಇಂಧನ ದರಗಳಿಂದಾಗಿ ದಿಲ್ಲಿ ಹಾಗೂ ಮುಂಬೈಯಲ್ಲಿ ಪೆಟ್ರೋಲ್ ಲೀಟರ್‍ಗೆ ದರ ಸಾರ್ವಕಾಲಿಕ ಗರಿಷ್ಟ 84.44 ರೂ. ಹಾಗೂ 94.93 ರೂ.ಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News