ಇರಾನ್, ರಶ್ಯದಿಂದ ಜಂಟಿ ಸಮರಾಭ್ಯಾಸ

Update: 2021-02-17 14:58 GMT

 ಟೆಹರಾನ್ (ಇರಾನ್), ಫೆ. 17: ಇರಾನ್‌ನ ಸಶಸ್ತ್ರ ಪಡೆಗಳು ಮಂಗಳವಾರ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ರಶ್ಯದೊಂದಿಗೆ ಜಂಟಿ ನೌಕಾ ಸಮರಾಭ್ಯಾಸವನ್ನು ಆರಂಭಿಸಿವೆ. ಸಮುದ್ರ ಮಾರ್ಗದ ಮೂಲಕ ನಡೆಯುವ ವ್ಯಾಪಾರದ ಭದ್ರತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಇರಾನ್‌ನ ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

‘ಮ್ಯಾರಿಟೈಮ್ ಸೆಕ್ಯುರಿಟಿ ಬೆಲ್ಟ್ ಎಕ್ಸರ್‌ಸೈಸ್’ ಎಂಬ ಹೆಸರಿನ ಯುದ್ಧಾಭ್ಯಾಸವು 17,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News