90ರ ದಶಕದಲ್ಲಿ ರಾಮಮಂದಿರಕ್ಕಾಗಿ ಸಂಗ್ರಹಿಸಿದ ಹಣದ ಕುರಿತು ಕೇಳಿದ್ದಕ್ಕೆ ವಿಹಿಂಪ ನಾಯಕ ಚಂಪತ್ ರಾಯ್ ಪ್ರತಿಕ್ರಿಯೆ ಇದು

Update: 2021-02-19 06:19 GMT

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಹಣ ಸಂಗ್ರಹಿಸುವ ಕಾರ್ಯ ಆರಂಭವಾಗಿದೆ. 90ರ ದಶಕದಲ್ಲಿ ಕೂಡಾ ರಾಮಮಂದಿರ ನಿರ್ಮಾಣಕ್ಕೆಂದು ಹಣ ಸಂಗ್ರಹ ಮಾಡಲಾಗಿತ್ತು. ಆ ಹಣವನ್ನೂ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತದೆಯೇ ಎಂಬ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್‌ ನ ರಾಮಮಂದಿರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಉತ್ತರ ನೀಡದೇ ತಡಬಡಾಯಿಸಿದ ಘಟನೆ ನಡೆದಿದೆ.

Ndtv ವಾಹಿನಿಯು ನಡೆಸಿದ ಸಂದರ್ಶನದಲ್ಲಿ ಸಂದರ್ಶಕಿಯು ಈ ಪ್ರಶ್ನೆಗಳನ್ನು ಕೇಳಿದಾಗ ಗಲಿಬಿಲಿಗೊಂಡಂತೆ ಕಂಡುಬಂದ ಚಂಪತ್‌ ರಾಯ್‌, "ಇದು ನಿಮ್ಮ ಪ್ರಶ್ನೆ ಅಲ್ಲ, ಈ ಪ್ರಶ್ನೆಯನ್ನು ನಿಮ್ಮೊಂದಿಗೆ ಕೇಳಲು ಯಾರು ಹೇಳಿದ್ದಾರೋ, ಅವರು ಮೂರ್ಖರು, ಬುದ್ಧಿಯಿಲ್ಲದವರು" ಎಂಧು ಉತ್ತರ ನೀಡಿದ್ದಾರೆ.

ಈ ಪ್ರಶ್ನೆಯು ಎನ್ಡಿಟಿವಿ ಕೇಳುತ್ತಿದೆ ಎಂದು ಸಂದರ್ಶಕಿ ಹೇಳಿದಾಗ, ಈ ಪ್ರಶ್ನೆಯನ್ನು ಎನ್ಡಿಟಿವಿಯ ಯಾರು ಬರೆದು ನಿಮಗೆ ನೀಡಿದ್ದಾರೋ, ಅವರು ಮೂರ್ಖರು. ಅವರಿಗೆ ಸ್ವಲ್ಪವೂ ಬುದ್ಧಿಯಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ" ಎಂದಷ್ಟೇ ಹೇಳಿ ಉತ್ತರ ನೀಡದೇ ಜಾರಿಕೊಂಡಿದ್ದಾರೆ.

ಬಳಿಕ ಮಾತನಾಡಿದ ಅವರು, "ಒಟ್ಟು 37,000 ಮಂದಿ ಕಾರ್ಯಕರ್ತರನ್ನೂ ಈ ಕಾರ್ಯಕ್ಕೆ ನಿಯೋಜನೆ ಮಾಡಿದ್ದೇವೆ. ಮೂರು ಪ್ರಮುಖ ಬ್ಯಾಂಕ್‌ ಗಳಲ್ಲಿ ಅವರು ಖಾತೆಯನ್ನು ಹೊಂದಿದ್ದಾರೆ. ಸಂಗ್ರಹವಾದ ದೇಣಿಗೆಗಳನ್ನು ಅವರು ಮಾತ್ರವೇ ಬ್ಯಾಂಕ್‌ ಗೆ ತಂದೊಪ್ಪಿಸಬಹುದಾಗಿದೆ. ನಾವು ಮನೆಯ ಮುಂದೆ ಸ್ಟಿಕ್ಕರ್‌ ಅಂಟಿಸುವಂತೆ ಯಾರನ್ನೂ ಕೇಳಿಕೊಂಡಿಲ್ಲ. ಇನ್ನು ರಾಜಕೀಯದವರು ಚುನಾವಣೆಯ ವೇಳೆ ಕರಪತ್ರ, ಸ್ಟಿಕ್ಕರ್‌, ಧ್ವಜಗಳನ್ನು ಹಾಕುತ್ತಾರೆ. ಇಲ್ಲಿಯೂ ಸ್ಟಿಕ್ಕರ್‌ ಹಾಕಿದರೆ ತಪ್ಪೇನಿಲ್ಲ" ಎಂದು ಸಂದರ್ಶನದಲ್ಲಿ ಚಂಪತ್‌ ರಾಯ್‌ ಹೇಳಿಕೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News