ಕೋವಿಡ್ ಸಂಕಷ್ಟದಲ್ಲೂ ರಾಮಮಂದಿರಕ್ಕಾಗಿ ಬಿಜೆಪಿಯಿಂದ ಚಂದಾ ವಸೂಲಿ: ಅಖಿಲೇಶ್ ಆರೋಪ

Update: 2021-02-20 14:07 GMT

ಲಕ್ನೋ: ಕೋವಿಡ್-19ನಂತಹ ವಿಷಮ ಪರಿಸ್ಥಿತಿಯಲ್ಲೂ ಬಿಜೆಪಿ ಪಕ್ಷ ರಾಮಮಂದಿರಕ್ಕಾಗಿ ಜನರಿಂದ ಚಂದಾ ಸಂಗ್ರಹಿಸುತ್ತಿದೆ. ಆ ಮೂಲಕ ಸಾಂಕ್ರಾಮಿಕ ರೋಗವನ್ನೇ ಅದು ಬಂಡವಾಳವನ್ನಾಗಿ ಮಾಡಿಕೊಂಡಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಈ ಕುರಿತಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, “ವಿಪತ್ತಿನಲ್ಲಿ ಅವಕಾಶಗಳನ್ನು ಸೃಷ್ಟಿಸಿದ್ದೇವೆ ಎಂದು ಬಿಜೆಪಿ ಸರಕಾರವೇ ಹೇಳಿಕೊಂಡಿದೆ. ಆದ್ದರಿಂದ ಕೋವಿಡ್ ನಂತಹ ವಿಪತ್ತಿನ ಸಮಯದಲ್ಲಿ ರಾಮಮಂದಿರಕ್ಕಾಗಿ ಬಿಜೆಪಿ ಚಂದಾ ಸಂಗ್ರಹಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ‘ಚಂದಾಜೀವಿಗಳು’ಎಂದು ಕರೆದಿರುವ ಅಖಿಲೇಶ್, ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಚಂದಾ ಎತ್ತುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನಮ್ಮಲ್ಲಿ ದಕ್ಷಿಣೆ ನೀಡುವ ಸಂಸ್ಕೃತಿ ಇದೆ. ಬಿಜೆಪಿ ಒಪ್ಪಿಕೊಂಡರೆ ದಕ್ಷಿಣೆ ನೀಡಲು ನಾವು ಸಿದ್ಧರಿದ್ದೇವೆ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News