ದಕ್ಷಿಣ ಚೀನಾ ಸಮುದ್ರದಲ್ಲಿ ಬಲಪ್ರಯೋಗ ಬೇಡ: ಚೀನಾಕ್ಕೆ ಅಮೆರಿಕ ಎಚ್ಚರಿಕೆ

Update: 2021-02-20 18:45 GMT

ವಾಶಿಂಗ್ಟನ್, ಫೆ. 20: ವಿವಾದಿತ ಜಲಪ್ರದೇಶಗಳಲ್ಲಿ ಬಲ ಪ್ರಯೋಗ ಮಾಡದಂತೆ ಅಮೆರಿಕ ಶುಕ್ರವಾರ ಚೀನಾಕ್ಕೆ ಎಚ್ಚರಿಕೆ ನೀಡಿದೆ ಹಾಗೂ ದಕ್ಷಿಣ ಚೀನಾ ಸಮುದ್ರ ತನಗೆ ಸೇರಿದ್ದು ಎಂಬ ಚೀನಾದ ನಿಲುವು ಕಾನೂನುಬಾಹಿರ ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ತನ್ನ ಜಲಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿವೆ ಎಂಬುದಾಗಿ ಚೀನಾ ಭಾವಿಸುವ ವಿದೇಶಿ ನೌಕೆಗಳ ಮೇಲೆ ದಾಳಿ ಮಾಡಲು ತನ್ನ ಕರವಾಳಿ ರಕ್ಷಣಾ ಪಡೆಗೆ ಅಧಿಕಾರ ನೀಡುವ ಚೀನಾದ ನೂತನ ಕಾನೂನಿನ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ಚೀನಾದೊಂದಿಗೆ ಸಮುದ್ರ ಹಂಚಿಕೊಂಡಿರುವ ನೆರೆ ದೇಶಗಳನ್ನು ಬೆದರಿಸಲು ಈ ಕಾನೂನನ್ನು ಬಳಸಬಹುದಾಗಿದೆ ಎನ್ನುವುದನ್ನು ಕಾನೂನಿನ ಒಕ್ಕಣೆ ಬಲವಾಗಿ ಸೂಚಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದರು.

 ‘‘ಜವಾಬ್ದಾರಿಯುತ ಸಮುದ್ರ ಪಡೆಗಳು ವೃತ್ತಿಪರವಾಗಿ ವರ್ತಿಸುತ್ತವೆ ಹಾಗೂ ತಮ್ಮ ಅಧಿಕಾರಗಳನ್ನು ಚಲಾಯಿಸುವಾಗ ಸಂಯಮ ವಹಿಸುತ್ತವೆ ಎನ್ನುವುದನ್ನು ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಕಾರ್ಯಾಚರಿಸುತ್ತಿರುವ ಇತರ ಎಲ್ಲ ದೇಶಗಳ ಗಮನಕ್ಕೆ ನಾವು ತರಬಯಸುತ್ತೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೈಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News