“ಸಾಮಾಜಿಕ ತಾಣಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದನ್ನು ತಡೆಯಲು ಕೇಂದ್ರವು ಕಾನೂನುಗಳನ್ನು ರೂಪಿಸುತ್ತಿದೆ”

Update: 2021-02-21 14:18 GMT

ಕೋಲ್ಕತಾ,ಫೆ.21: ಸಾಮಾಜಿಕ ಮಾಧ್ಯಮಗಳು ಇಂದು ಎಷ್ಟೊಂದು ಪ್ರಬಲವಾಗಿವೆಯೆಂದರೆ ಅವು ಸರಕಾರಗಳನ್ನೂ ಉರುಳಿಸಬಲ್ಲವು, ಅರಾಜಕತೆಗೆ ನಾಂದಿ ಹಾಡಬಲ್ಲವು ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಲ್ಲವು ಎಂದು ಹಿರಿಯ ಬಿಜೆಪಿ ನಾಯಕ ರಾಮ ಮಾಧವ ಅವರು ಇಲ್ಲಿ ಹೇಳಿದರು.

 ಸಾಮಾಜಿಕ ಮಾಧ್ಯಮಗಳಿಗೆ ಯಾವುದೇ ಗಡಿಗಳಿಲ್ಲ,ಹೀಗಾಗಿ ಅವುಗಳನ್ನು ನಿಯಂತ್ರಿಸುವುದು ಕಷ್ಟವಾಗಿದೆ ಎಂದು ತನ್ನ ‘ಬಿಕಾಸ್ ಇಂಡಿಯಾ ಕಮ್ಸ್ ಫಸ್ಟ್ ’ ನೂತನ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ ಅವರು,ಈ ಶಕ್ತಿಗಳು ಅರಾಜಕತೆಯನ್ನು ಉತ್ತೇಜಿಸಬಲ್ಲವು ಮತ್ತು ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಆದರೆ ಇದಕ್ಕೆ ಪರಿಹಾರವು ಸಂವಿಧಾನದ ಚೌಕಟ್ಟಿನಲ್ಲಿಯೇ ಇರಬೇಕಾಗುತ್ತದೆ ಎಂದು ತಿಳಿಸಿದರು. ಪ್ರಜಾಪ್ರಭುತ್ವವು ಇಂದು ಒತ್ತಡದಲ್ಲಿದೆ ಮತ್ತು ರಾಜಕೀಯೇತರ ಶಕ್ತಿಯ ಉದಯದೊಂದಿಗೆ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನು ಎದುರಿಸಲು ಮತ್ತು ನಿಭಾಯಿಸಲು ಹೊಸ ಕಾನೂನುಗಳ ಅಗತ್ಯವಿದೆ ಮತ್ತು ಸರಕಾರವು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.

ಕೆಲವು ಖಾತೆಗಳನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಟ್ವಿಟರ್ ನಡುವಿನ ವಿವಾದದ ನಡುವೆಯೇ ರಾಮ ಮಾಧವ ಅವರ ಈ ಹೇಳಿಕೆಯು ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News