ನ್ಯೂಆರ್ಲಿಯನ್ಸ್‌ನಲ್ಲಿ ಶೂಟೌಟ್: ಇಬ್ಬರು ಸಾವು

Update: 2021-02-21 15:45 GMT

ಮೆಟೈರ್,ಫೆ.21: ಅಮೆರಿಕದ ನ್ಯೂ ಆರ್ಲಿಯನ್ಸ್ ರಾಜ್ಯದಲ್ಲಿ ಶನಿವಾರ ದುಷ್ಕರ್ಮಿಯೊಬ್ಬ ಬಂದೂಕುಗಳ ಮಾರಾಟ ಮಳಿಗೆಗೆ ನುಗ್ಗಿ, ಮನಬಂದಂತೆ ಗುಂಡು ಹಾರಿಸಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಆಗ ಸ್ಥಳದಲ್ಲಿದ್ದ ಕೆಲವು ಗ್ರಾಹಕರು ಹಾಗೂ ಮಳಿಗೆಯ ಸಿಬ್ಬಂದಿ ಶೂಟರ್‌ಗೆ ಗುಂಡಿಕ್ಕಿದ್ದು, ಆತ ಕೂಡಾ ಮೃತಪಟ್ಟಿದ್ದಾನೆ.

 ಮೆಟೈರ್‌ನ ಉಪನಗರವಾದ ಜೆಫರ್ಸನ್ ಬಂದೂಕು ಮಾರಾಟ ಮಳಿಗೆಯಲ್ಲಿ ಶನಿವಾರ 2:50ರ ಮಧ್ಯಾಹ್ನ ಗುಂಡು ಹಾರಾಟ ನಡೆದಿದ್ದಾಗಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಘಟನೆಯಲ್ಲಿ ಇತರ ಇಬ್ಬರಿಗೂ ಗುಂಡೇಟಿನ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಅವರ ಸ್ಥಿತಿ ಸ್ಥಿರವಾಗಿದೆಯೆಂದು ಮೂಲಗಳು ತಿಳಿಸಿವೆ. ಗುಂಡೆಸೆತದ ಘಟನೆಯ ಬಗ್ಗೆ ಪೊಲೀಸರು ವಿವರಗಳನ್ನು ಕಲೆ ಹಾಕುತ್ತಿದ್ದು, ತನಿಖೆ ಮುಂದುವರಿದಿದೆಯೆಂದು ಜೆಫರ್ಸನ್ ಪ್ಯಾರಿಶ್ ವಿಭಾಗದ ಪೊಲೀಸ್ ವರಿಷ್ಠ ಜೋಸೆಫಂ ಲೊಪಿಂಟೊ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News