ಜಪಾನ್: ಒಂಟಿತನ ನಿರ್ವಹಣೆಗೆ ಪ್ರತ್ಯೇಕ ಸಚಿವರ ನೇಮಕ

Update: 2021-02-23 16:04 GMT
ಫೋಟೊ ಕೃಪೆ: twitter.com/Zonknews20

ಟೋಕಿಯೊ (ಜಪಾನ್), ಫೆ. 23: ಜಪಾನ್‌ನಲ್ಲಿ ಮೊದಲ ಒಂಟಿತನ ನಿರ್ವಹಣೆ ಸಚಿವರನ್ನು ಈ ತಿಂಗಳು ನೇಮಿಸಲಾಗಿದೆ. ಕೋವಿಡ್-19 ಅವಧಿಯಲ್ಲಿ, ದೇಶದ ಆತ್ಮಹತ್ಯೆ ದರ 11 ವರ್ಷಗಳಲ್ಲೇ ಮೊದಲ ಬಾರಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಯ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಈ ಸಚಿವಾಲಯವನ್ನು ಸ್ಥಾಪಿಸಲಾಗಿದೆ.

ಟೆಟ್‌ಸುಶಿ ಸಕಮೊಟೊ ಅವರನ್ನು ಪ್ರಧಾನಿ ಯೊಶಿಹಿಡೆ ಸುಗ ಒಂಟಿತನ ನಿರ್ವಹಣ ಸಚಿವರಾಗಿ ನೇಮಿಸಿದ್ದಾರೆ. ಅವರು ಈಗಾಗಲೇ ದೇಶದ ಕುಸಿಯುತ್ತಿರುವ ಜನಸಂಖ್ಯೆಯನ್ನು ತಡೆಯುವ ಹಾಗೂ ಪ್ರಾದೇಶಿಕ ಆರ್ಥಿಕತೆಗಳಿಗೆ ಮರುಜೀವ ನೀಡುವ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News