ಮಾರ್ಚ್ 1 ರಂದು 60 ವರ್ಷಕ್ಕಿಂತ ಮೇಲ್ಮಟ್ಟವರಿಗೆ ಕೋವಿಡ್ ಲಸಿಕೆ: ಪ್ರಕಾಶ್ ಜಾವಡೇಕರ್

Update: 2021-02-24 12:05 GMT

ಹೊಸದಿಲ್ಲಿ: ಎರಡನೇ ಹಂತದ ಕೋವಿಡ್ ಲಸಿಕೆ ನೀಡಿಕೆ ಅಭಿಯಾನವು ಮಾರ್ಚ್ 1 ರಂದು ಆರಂಭವಾಗಲಿದ್ದು, 60 ವರ್ಷಕ್ಕಿಂತ ಮೇಲ್ಮಟ್ಟವರು ಹಾಗೂ 45 ವರ್ಷಕ್ಕಿಂತ ಮೇಲ್ಮಟ್ಟ ಇತರ ಗಂಭೀರ ಕಾಯಿಲೆಯಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ತಿಳಿಸಿದ್ದಾರೆ.

ಸರಕಾರದಿಂದ ನಡೆಸಲ್ಪಡುವ 10,000 ಕೇಂದ್ರಗಳಲ್ಲಿ(ಅಲ್ಲಿ ಅದು ಉಚಿತವಾಗಿರುತ್ತದೆ)ಹಾಗೂ 20,000 ಖಾಸಗಿ ಕೇಂದ್ರಗಳಲ್ಲಿ ಲಸಿಕೆಗಳನ್ನುನೀಡಲಾಗುತ್ತದೆ.ಖಾಸಗಿ ಕೇಂದ್ರಗಳಲ್ಲಿ ಲಸಿಕೆ ಹಾಕುವ ಶುಲ್ಕವನ್ನು ಕೆಲವೇ ದಿನಗಳಲ್ಲಿ ಖಚಿತಪಡಿಸಲಾಗುತ್ತದೆ.

ಮಾರ್ಚ್ 1ರಿಂದ 60 ವರ್ಷಕ್ಕಿಂತ ಮೇಲ್ಮಟ್ಟ ಹಾಗೂ ಇತರ ಗಂಭೀರ ಕಾಯಿಲೆಯಿರುವ 45 ವರ್ಷಕ್ಕಿಂತ ಮೇಲ್ಮಟ್ಟವರಿಗೆ ಸರಕಾರದ 10,000 ಕೇಂದ್ರಗಳಲ್ಲಿ ಹಾಗೂ 20,000ಕ್ಕೂ ಅಧಿಕ ಖಾಸಗಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಸರಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆಗಳನ್ನು ನೀಡಲಾಗುವುದು ಎಂದು ಜಾವಡೇಕರ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಪಡೆಯಲು ಬಯಸುವವರು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅವರು ಪಾವತಿಸಬೇಕಾದ ಮೊತ್ತವನ್ನು ಆರೋಗ್ಯ ಸಚಿವಾಲಯವು ಲಸಿಕೆ ತಯಾರಕರು ಹಾಗೂ ಆಸ್ಪತ್ರೆಗಳೊಂದಿಗೆ ಚರ್ಚಿಸಿ ಮೂರು-ನಾಲ್ಕು ದಿನಗಳಲ್ಲಿ ಬೆಲೆ ನಿರ್ಧರಿಸುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ.

2ನೇ ಹಂತದ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ 27 ಕೋಟಿಗೂ ಅಧಿಕ ಜನರು ಒಳಗೊಳ್ಳುವ ನಿರೀಕ್ಷೆಯಿದೆ.  ಈ ಗುಂಪಿನಲ್ಲಿ ಸುಮಾರು 10 ಕೋಟಿ ಜನರು 60ಕ್ಕಿಂತ ಹೆಚ್ಚಿನ ವಯಸ್ಸಿನವರು ಎಂದು ಸರಕಾರ ತಿಳಿಸಿದೆ.

ಎರಡನೇ ಹಂತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಎಲ್ಲ ಮುಖ್ಯಮಂತ್ರಿಗಳು, ಸಂಸದರು ಹಾಗೂ 50 ವರ್ಷಕ್ಕಿಂತ ಮೇಲ್ಮಟ್ಟ ಎಲ್ಲ ಶಾಸಕರಿಗೆ ಲಸಿಕೆ ನೀಡಲಾಗುವುದು ಎಂದು ಕಳೆದ ತಿಂಗಳು ಮೂಲಗಳು ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News