ಪ್ರಧಾನಿ ಮೋದಿಯು ಈ ದೇಶದ ಅತ್ಯಂತ ದೊಡ್ಡ ʼದಂಗೆಕೋರʼ: ಮಮತಾ ಬ್ಯಾನರ್ಜಿ ವಾಗ್ದಾಳಿ

Update: 2021-02-24 12:49 GMT

ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ "ಈ ದೇಶದ ಅತ್ಯಂತ ದೊಡ್ಡ ದಂಗೆಕೋರ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ವಾಗ್ದಾಳಿ ನಡೆಸಿದ್ದಾರೆ.

ಹೂಗ್ಲಿಯಲ್ಲಿ ಇಂದು ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು "ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರ ಹಣೆಬರಹಕ್ಕಿಂತಲೂ ಕೆಟ್ಟ ಹಣೆಬರಹ ಮೋದಿಯದ್ದಾಗಲಿದೆ, ಹಿಂಸೆಯಿಂದ ಏನನ್ನೂ ಸಾಧಿಸಲಾಗದು" ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಲವಂತದ ಹಣವಸೂಲಿಯನ್ನು ತೃಣಮೂಲ ಕಾಂಗ್ರೆಸ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪವನ್ನು ಖಂಡಿಸಿದ ಅವರು "ಪ್ರತಿ ಬಾರಿ ನೀವು ತೃಣಮೂಲ ಕಾಂಗ್ರೆಸ್ ಅನ್ನು 'ತೋಲಾಬಾಜ್' ಎಂದು ಕರೆದರೆ ನಾನು ನಿಮ್ಮನ್ನು ದಂಗೆಕೋರರು(ದಂಗಾಬಾಝ್) ಹಾಗೂ  ಧಂಡಾಬಾಝ್ (ತಮಗಾಗಿ ಕೇಳುವವರು) ಎಂದು ಕರೆಯುತ್ತೇನೆ" ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಗೋಲ್ ಕೀಪರ್ ಆಗುವುದಾಗಿ ಹೇಳಿದ ಮಮತಾ "ಬಿಜೆಪಿಗೆ ಒಂದೇ ಒಂದು ಗೋಲ್ ಹೊಡೆಯುವುದು ಸಾಧ್ಯವಾಗುವುದಿಲ್ಲ, ಚೆಂಡು ಗೋಲ್ ಪೋಸ್ಟ್ ಮೇಲಿನಿಂದಲೇ ಸಾಗಲಿವೆ" ಎಂದು ಹೇಳಿದರು.

ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯ ಪತ್ನಿಯನ್ನು ಕಲ್ಲಿದ್ದಲು ಹಗರಣ ಸಂಬಂಧ ವಿಚಾರಣೆ ನಡೆಸಿದ ಸಿಬಿಐ ಕ್ರಮದ ಕುರಿತು ಪ್ರತಿಕ್ರಿಯಿಸಿದ ಮಮತಾ ಇದು "ಮಹಿಳೆಯರಿಗೆ ಮಾಡಿದ ಅವಮಾನ" ಎಂದು ಹೇಳಿದರು.

ಮಮತಾ ಅವರ ಸಮ್ಮುಖದಲ್ಲಿ ಇಂದು ಕ್ರಿಕೆಟಿಗ ಮನೋಜ್ ತಿವಾರಿ ಸಹಿತ ಹಲವಾರು ಬಂಗಾಳಿ ನಟರು ಟಿಎಂಸಿ ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News