ಶ್ರೀಲಂಕಾದಿಂದ 1.35 ಕೋಟಿ ಡೋಸ್ ಭಾರತೀಯ ಲಸಿಕೆಗೆ ಬೇಡಿಕೆ

Update: 2021-02-24 18:47 GMT

ಕೊಲಂಬೊ (ಶ್ರೀಲಂಕಾ), ಫೆ. 24: ಭಾರತ ಈಗಾಗಲೇ ಉಚಿತವಾಗಿ ನೀಡಿರುವ 5 ಲಕ್ಷ ಕೊರೋನ ವೈರಸ್ ಲಸಿಕಾ ಡೋಸ್‌ಗಳಿಗೆ ಹೆಚ್ಚುವರಿಯಾಗಿ, ಇನ್ನೂ 1.35 ಕೋಟಿ ಆ್ಯಸ್ಟ್ರಝೆನೆಕ ಲಸಿಕೆಯ ಡೋಸ್‌ಗಳಿಗಾಗಿ ಶ್ರೀಲಂಕಾವು ಬೇಡಿಕೆ ಸಲ್ಲಿಸಿದೆ. ಅದೂ ಅಲ್ಲದೆ, ಎರಡನೇ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಶ್ರೀಲಂಕಾವು ಚೀನಾದ ಲಸಿಕೆಗಳನ್ನು ಬಳಸುವ ಸಾಧ್ಯತೆಯಿಲ್ಲ ಎಂದು ಸರಕಾರದ ವಕ್ತಾರರೊಬ್ಬರು ಹೇಳಿದ್ದಾರೆ.

ಚೀನಾ ಮತ್ತು ರಶ್ಯದ ಲಸಿಕೆಗಳು ಈವರೆಗೂ ಸಿದ್ಧಗೊಂಡಿರದಿರುವುದರಿಂದ, ಶ್ರೀಲಂಕಾವು ಎರಡನೇ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಆ್ಯಸ್ಟ್ರಝೆನೆಕ ಲಸಿಕೆಗಳನ್ನು ಮಾತ್ರ ಬಳಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾದ ತೋಟಗಾರಿಕಾ ಸಚಿವರೂ ಆಗಿರುವ ರಮೇಶ್ ಪತಿರಣ ಹೇಳಿದರು.

‘‘ಮೂರನೇ ಹಂತದ ಪರೀಕ್ಷೆಗಳನ್ನು ನಡೆಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಚೀನಾದ ಲಸಿಕಾ ಕಂಪೆನಿಗಳು ಸಲ್ಲಿಸಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News