ಅಂತರ್ ರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲಿನ ನಿರ್ಬಂಧ ಮಾ.31ರ ತನಕ ವಿಸ್ತರಣೆ

Update: 2021-02-27 06:48 GMT

ಹೊಸದಿಲ್ಲಿ: ಅಂತರ್ ರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಮಾರ್ಚ್ 31ರ ತನಕ ವಿಸ್ತರಿಸಲಾಗಿದೆ ಎಂದು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್ ಅಥವಾ ಡಿಜಿಸಿಎ ಶುಕ್ರವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ವಿಮಾನಯಾನ ಕಾವಲು ಸಮಿತಿ ಯಿಂದ ವಿಶೇಷವಾಗಿ ಅನುಮೋದನೆ ಪಡೆದಿರುವ ಅಂತರ್ ರಾಷ್ಟ್ರೀಯ ಆಲ್-ಕಾರ್ಗೊ ಕಾರ್ಯಾಚರಣೆಗಳು ಹಾಗೂ ವಿಮಾನಗಳಿಗೆ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಡಿಡಿಸಿಎ ತಿಳಿಸಿದೆ.

ಆದಾಗ್ಯೂ ವಿಮಾನ ಪ್ರಾಧಿಕಾರವು ನಿಗದಿತ ಅಂತರ್ ರಾಷ್ಟ್ರೀಯ ವಿಮಾನಗಳಿಗೆ ಆಯ್ದ ಮಾರ್ಗಗಳಲ್ಲಿ ಹಾರಾಟ ನಡೆಸಲು ಅನುಮತಿಸಬಹುದು ಎಂದು ಡಿಜಿಸಿಎ ತಿಳಿಸಿದೆ.

ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಕಳೆದ ವರ್ಷದ ಮಾರ್ಚ್‍ನಲ್ಲಿ ದೇಶದಲ್ಲಿ ಅಂತರ್ ರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧಗಳನ್ನು ಘೋಷಿಸಲಾಗಿತ್ತು. 

ಕಳೆದ ವರ್ಷದ ಅಂತ್ಯದಲ್ಲಿ ಕೇಂದ್ರ ಸರಕಾರವು ದೇಶೀಯ ವಿಮಾನ ಕಾರ್ಯಾಚರಣೆಗೆ ಅವಕಾಶ ನೀಡಿತ್ತು. 

ಕಳೆದ ಡಿಸೆಂಬರ್ ನಲ್ಲಿ ಯುರೋಪ್ ದೇಶದಲ್ಲಿ ಕೊರೋನ ವೈರಸ್ ನ ಹೆಚ್ಚು ಸಾಂಕ್ರಾಮಿಕ ತಳಿ ಪತ್ತೆಯಾದ ಬಳಿಕ ಅಧಿಕಾರಿಗಳು ಇಂಗ್ಲೆಂಡ್‍ಗೆ ಹೋಗುವ ಹಾಗೂ ಬರುವ ವಿಮಾನಗಳ ಮೇಲೆ ನಿಷೇಧ ಹೇರಿತ್ತು. ನಂತರ ನಿಷೇಧ ರದ್ದುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News