"ಬಂಗಾಳಕ್ಕೆ ತನ್ನ ಸ್ವಂತ ಮಗಳು ಮಾತ್ರ ಬೇಕು": ಬಿಜೆಪಿಗೆ ಪ್ರಶಾಂತ್ ಕಿಶೋರ್ ತಿರುಗೇಟು

Update: 2021-02-27 11:31 GMT

ಹೊಸದಿಲ್ಲಿ: "ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಒಂದು ಪ್ರಮುಖ ಹೋರಾಟ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ ಹಾಗೂ ಬಂಗಾಳದ ಜನರು ತಮ್ಮ ಸಂದೇಶದೊಂದಿಗೆ ಸಿದ್ಧರಾಗಿದ್ದಾರೆ ಮತ್ತು ತಮ್ಮ ಸರಿಯಾದ ಕಾರ್ಡ್ ತೋರಿಸಲು ದೃಢಚಿತ್ತರಾಗಿದ್ದಾರೆ" ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞರಾದ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಐ-ಪ್ಯಾಕ್ ಎಂಬ ಸಂಸ್ಥೆ ನಡೆಸುತ್ತಿರುವ ಪ್ರಶಾಂತ್ ಕಿಶೋರ್, ಟಿಎಂಸಿಯ ಚುನಾವಣಾ ಘೋಷವಾಕ್ಯವನ್ನೂ ಟ್ವೀಟ್‍ನಲ್ಲಿ ಬರೆದಿದ್ದಾರೆ. "#ಬಾಂಗ್ಲಾನಿಜೆರ್ ಮೆಯೆಕೀಚಾಯ್ (ಬಂಗಾಳಕ್ಕೆ ತನ್ನ ಸ್ವಂತ ಮಗಳು ಮಾತ್ರ ಬೇಕು" ಎಂದು ಪ್ರಶಾಂತ್ ಕಿಶೋರ್ ಬರೆದಿದ್ದಾರೆ ಹಾಗೂ ಕೊನೆಗೆ "ಆನ್ ಮೇ 2 ಹೋಲ್ಡ್ ಮಿ ಟು ಮೈ ಲಾಸ್ಟ್ ಟ್ವೀಟ್" ಎಂದು ಅವರು ಬರೆದಿದ್ದಾರೆ.

ದೇಶಾದ್ಯಂತ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆಯಿದೆ. ಈಗಾಗಲೇ ಎರಡೂ ಪಕ್ಷಗಳು ಹಲವು ವಿಚಾರಗಳಲ್ಲಿ  ಪ್ರಖರ ವಾಗ್ದಾಳಿಯಲ್ಲಿ  ತೊಡಗಿಕೊಂಡಿದ್ದು ಶುಕ್ರವಾರ ಚುನಾವಣಾ ಆಯೋಗ ರಾಜ್ಯದಲ್ಲಿ ಎಂಟು ಸುತ್ತಿನ  ಚುನಾವಣೆ ಘೋಷಿಸಿರುವುದು ಆಡಳಿತ ಟಿಎಂಸಿಗೆ ವ್ಯಾಪಕ ಅಸಮಾಧಾನ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News