ದೇಶದ ಸಾಂಸ್ಥಿಕ ಸಮತೋಲನವನ್ನು ಆರೆಸ್ಸೆಸ್ ನಾಶಪಡಿಸಿದೆ: ರಾಹುಲ್ ಗಾಂಧಿ

Update: 2021-02-27 14:05 GMT

ತೂತುಕುಡಿ(ತ.ನಾಡು): ಕಳೆದ ಆರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ಚುನಾಯಿತ ಸಂಸ್ಥೆಗಳು ಹಾಗೂ ಮುಕ್ತ ಪತ್ರಿಕಾ ವ್ಯವಸ್ಥೆಗಳ ಮೇಲೆ ವ್ಯವಸ್ಥಿತವಾಗಿ ಆಕ್ರಮಣ ಮಾಡುವ ಮೂಲಕ ದೇಶದಲ್ಲಿನ ಸಾಂಸ್ಥಿಕ ಸಮತೋಲನವನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ತೂತುಕುಡಿಯ ವಿಒಸಿ ಕಾಲೇಜಿನಲ್ಲಿ ತನ್ನ ಹೇಳಿಕೆಯ ಕುರಿತು ವಿವರಣೆ ನೀಡಿದ ರಾಹುಲ್, “ಒಂದು ರಾಷ್ಟ್ರವು ತನ್ನ ಸಂಸ್ಥೆಗಳ ನಡುವಿನ ಸಮತೋಲನವಾಗಿದೆ. ಆ ಸಮತೋಲನವು ಅಸ್ಥಿರವಾಗಿದ್ದರೆ ರಾಷ್ಟ್ರವು ತೊಂದರೆಗೊಳಗಾಗುತ್ತದೆ. ಇದು ಕೇಂದ್ರದ ಕಲ್ಪನೆ. ಭಾರತ ದೇಶವನ್ನು ರೂಪಿಸುವ ಸಂಸ್ಥೆಗಳು ಯಾವುವು? ಚುನಾಯಿತ ಸಂಸ್ಥೆಗಳು, ಲೋಕಸಭೆ, ವಿಧಾನಸಭೆಗಳು, ಪಂಚಾಯತ್ ಗಳಿವೆ,  ನ್ಯಾಯಾಂಗವಿದೆ. ಪೋಷಕ ಮುಕ್ತ ಪತ್ರಿಕೆ ಇದೆ.  ಈ ಸಂಸ್ಥೆಗಳು ಒಟ್ಟಾಗಿ ದೇಶವನ್ನು ಒಟ್ಟಿಗೆ ಇಡುತ್ತವೆ ಎಂದರು.

ಈ ಎಲ್ಲ ಸಂಸ್ಥೆಗಳ ಮೇಲೆ ಒಂದು ವ್ಯವಸ್ಥಿತ ದಾಳಿಯನ್ನು ಕಳೆದ ಆರು ವರ್ಷಗಳಿಂದ ನಾವು  ನೋಡಿದ್ದೇವೆ. ಪ್ರಜಾಪ್ರಭುತ್ವವು ಅಬ್ಬರದಿಂದ ಸಾಯುವುದಿಲ್ಲ. ಅದು ನಿಧಾನವಾಗಿ ಸಾಯುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಸತ್ತಿದೆ ಎಂದು ಹೇಳಲು ನನಗೆ ಬೇಸರವಾಗುತ್ತದೆ. ಇದು ಇನ್ನು ಮುಂದೆ ಅಸ್ತಿತ್ವದಲ್ಲಿರಲಾರದು. ಇದು ಒಂದು ಸಂಘಟನೆಯಿಂದ ಸತ್ತುಹೋಗಿದೆ. ಆರೆಸ್ಸೆಸ್ ಭಾರೀ ಹಣಕಾಸಿನ ನೆರವಿನೊಂದಿಗೆ ನಮ್ಮ ಸಾಂಸ್ಥಿಕ ಸಮತೋಲನವನ್ನು ಭೇದಿಸಿ, ತೊಂದರೆಪಡಿಸುತ್ತಿದೆ ಎಂದು ವಯನಾಡ್ ಸಂಸದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News