ಜಾನುವಾರು ಸಾಗಾಟ ಮಾಡುವವರ ವಿರುದ್ಧ ಸದ್ಯಕ್ಕೆ ಕಠಿಣ ಕ್ರಮವಿಲ್ಲ: ಹೈಕೋರ್ಟ್ ಗೆ ತಿಳಿಸಿದ ರಾಜ್ಯ ಸರಕಾರ

Update: 2021-02-27 13:13 GMT

ಬೆಂಗಳೂರು, ಫೆ.27: ಜಾನುವಾರು ಸಾಗಣೆ ಮಾಡುವವರ ವಿರುದ್ಧ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ನಿಷೇಧ ಕಾಯ್ದೆ–2020ರಡಿ ಸದ್ಯಕ್ಕೆ ಕಠಿಣ ಕ್ರಮ ಅನುಸರಿಸುವುದಿಲ್ಲವೆಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮತ್ತೊಮ್ಮೆ ಭರವಸೆಯನ್ನು ನೀಡಿದೆ.

ರಾಜ್ಯ ಸರಕಾರ ಜಾರಿ ಮಾಡಿರುವ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ನಿಷೇಧ ಕಾಯ್ದೆ-2020ನ್ನು ಪ್ರಶ್ನಿಸಿ ಅರ್ಜಿದಾರರು ಸಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾ.ಓಕಾ, ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದನ್ನು ಗಮನದಲ್ಲಿಟ್ಟು ತಿದ್ದುಪಡಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಸಮಯ ನೀಡಿತು.

ಇದೇ ವೇಳೆ ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಸಮಯ ಬೇಕು ಎಂದು ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಕೋರಿದರು. ಹೀಗಾಗಿ ವಿಚಾರಣೆಯನ್ನು ಎ.5ಕ್ಕೆ ಪೀಠ ಮುಂದೂಡಲಾಗಿದೆ.

ಈ ಹಿಂದಿನ ವಿಚಾರಣೆ ವೇಳೆ ಮಧ್ಯಂತರ ತಡೆ ಕೋರಿಕೆಯನ್ನು ಪರಿಗಣಿಸುವುದಾಗಿ ಪೀಠ ಹೇಳಿದಾಗ, ನಿಯಮಾವಳಿ ರೂಪಿಸುವ ತನಕ ಹೊಸ ಕಾಯ್ದೆಯ ಸೆಕ್ಷನ್ 5ರ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸರಕಾರ ಭರವಸೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News