ಮಮತಾ ಬ್ಯಾನರ್ಜಿ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ

Update: 2021-02-27 14:41 GMT

ಕೋಲ್ಕತಾ,ಫೆ.27: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮನೆಮಗಳಾಗಿದ್ದಾರೆ ಎಂದು ಬಣ್ಣಿಸಿರುವ ತೃಣಮೂಲ ಕಾಂಗ್ರೆಸ್‌ನ ಪ್ರಚಾರ ಅಭಿಯಾನದ ಕುರಿತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರು ಮಾಡಿರುವ ಟ್ವೀಟ್ ವಿವಾದವನ್ನು ಹುಟ್ಟುಹಾಕಿದೆ. ಸುಪ್ರಿಯೊ ತನ್ನ ಫೇಸ್‌ಬುಕ್ ಮತ್ತು ಟ್ವಿಟರ್ ಪೋಸ್ಟ್‌ಗಳಲ್ಲಿ ‘ಬೇಟಿ ಪರಾಯಾ ಧನ್ ಹೋತಿ ಹೈ (ಮನೆಮಗಳು ಇನ್ನೊಬ್ಬರ ಮನೆಯ ಸ್ವತ್ತು) ’ಎಂದು ಹೇಳಿದ್ದರು.

ಇದನ್ನು ಮೊದಲು ಬಿಜೆಪಿಯ ಅಸನಸೋಲ್ ಜಿಲ್ಲಾ ಘಟಕವು ಪೋಸ್ಟ್ ಮಾಡಿದ್ದು,ಲಗತ್ತಿಸಿದ್ದ ಮೀಮ್ ನಲ್ಲಿ ಹೇಳಿದ್ದಕ್ಕೆ ತಾನು ಸಹಮತ ವ್ಯಕ್ತಪಡಿಸಿದ್ದೇನೆ ಎಂದು ಸುಪ್ರಿಯೊ ತನ್ನ ಪೋಸ್ಟ್‌ಗಳಲ್ಲಿ ಉಲ್ಲೇಖಿಸಿದ್ದರು.

ಟ್ವೀಟ್‌ನಲ್ಲಿಯ ಚಿತ್ರದಲ್ಲಿ ಮಮತಾ ಬ್ಯಾನರ್ಜಿ ತನ್ನನ್ನು ಬಂಗಾಳದ ಮಗಳು ಎಂದು ಹೇಳಿಕೊಳ್ಳುವುದನ್ನು ಮತ್ತು ಇದಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,‘ಮನೆಮಗಳು ಇನ್ನೊಬ್ಬರ ಮನೆಯ ಸ್ವತ್ತು. ಈ ಬಾರಿ ವಿದಾಯ ಹೇಳುತ್ತೇವೆ ’ಎಂದು ಉತ್ತರಿಸಿದ್ದನ್ನು ಬಿಂಬಿಸಲಾಗಿದೆ. ಮೀಮ್ ಅನ್ನು ಶೇರ್ ಮಾಡಿಕೊಂಡ ಸಂದರ್ಭದಲ್ಲಿ ಸುಪ್ರಿಯೊ,‘ಈ ಬಾರಿ ಖಂಡಿತವಾಗಿಯೂ ವಿದಾಯ ಹೇಳುತ್ತೇವೆ ’ ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News