ಕೊರೋನ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2021-03-02 04:17 GMT

ಬೆಂಗಳೂರು, ಮಾ. 2: ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮತಕ್ಷೇತ್ರ ಹಿರೇಕೆರೂರಿನ ಸ್ವಗೃಹದಲ್ಲಿ  ಸರ್ಕಾರಿ ವೈದ್ಯರಿಂದ ಕೊರೋನ ಲಸಿಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೊರೋನ ಲಸಿಕೆ ಪಡೆಯಲು ಹಿಂದೇಟು ಹಾಕುವುದು ಸರಿಯಲ್ಲ. ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಇದರತ್ತ ಯಾರೂ ಗಮನ ನೀಡಬಾರದು. ಕರ್ನಾಟಕ ಸರ್ಕಾರ ಜನರ ಸುರಕ್ಷತೆಗಾಗಿ ಕೊರೋನ ಲಸಿಕೆ ನೀಡುತ್ತಿದೆ‌. ಅದರಲ್ಲಿಯೂ ಪ್ರಧಾನಿ ನರೇಂದ್ರ‌ ಮೋದಿ ಕೊರೋನ ಲಸಿಕೆಯನ್ನು ಸರ್ಕಾರಿ ವೈದ್ಯರಿಂದ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ನಮ್ಮ ಭಾರತದಲ್ಲಿಯೇ ತಯಾರಿಸಿದ ಕೊರೋನ ಲಸಿಕೆಗೆ ಪ್ರಶಂಸೆ ವ್ಯಕ್ತವಾಗಿದೆ. ಕೊರೋನ ಸಂಘರ್ಷದ ಸಮಯದಲ್ಲಿ ಕರ್ನಾಟಕ ಹಾಗೂ ಭಾರತ ಸರ್ಕಾರ ಜನರೊಂದಿಗೆ ನಿಂತು ಅವರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿದೆ. ವೈದ್ಯರು ಲಸಿಕೆ ನೀಡಿದ ಬಳಿಕ‌ ಹೇಳಿದ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಸಾಕು. ಯಾವುದೇ ನಿರ್ಭೀತಿಯಿಂದ ಕೊರೋನ ಲಸಿಕೆ ಪಡೆಯಬೇಕೆಂದು ಬಿಸಿಪಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News