ಪ್ರಯಾಣಿಕ ತೀವ್ರ ಅಸ್ವಸ್ಥ: ಪಾಕಿಸ್ತಾನದಲ್ಲಿ ತುರ್ತು ಲ್ಯಾಂಡಿಂಗ್ ಆದ ಇಂಡಿಗೊ ವಿಮಾನ

Update: 2021-03-02 07:43 GMT

ಹೊಸದಿಲ್ಲಿ: ಪ್ರಯಾಣಿಕರೊಬ್ಬರು ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಿದ ಹಿನ್ನೆಲೆಯಲ್ಲಿ ಶಾರ್ಜಾ-ಲಕ್ನೋ ಇಂಡಿಗೊ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ಮಂಗಳವಾರ ತುರ್ತು ಲ್ಯಾಂಡಿಂಗ್ ಆಗಿದೆ. 

ವಿಮಾನ ನಿಲ್ದಾಣದ ಅಧಿಕೃತ ಹೇಳಿಕೆಯ ಪ್ರಕಾರ ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಕರಾಚಿಗೆ ಆಗಮಿಸಿದಾಗ ಪ್ರಯಾಣಿಕ ಮೃತಪಟ್ಟಿದ್ದರು.

“ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಶಾರ್ಜಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೊ ವಿಮಾನ 6 ಇ 1412 ಅನ್ನು ಕರಾಚಿಗೆ ತಿರುಗಿಸಲಾಯಿತು. ದುರದೃಷ್ಟವಶಾತ್ ಪ್ರಯಾಣಿಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಆಗಮಿಸುವ ವೇಳೆಗೆ ಪ್ರಯಾಣಿಕ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ ಎಂದು ಹೇಳಿಕೆಯೊಂದು ತಿಳಿಸಿದೆ.

ಪ್ರಯಾಣಿಕ ಕುಟುಂಬಕ್ಕೆ ವಿಮಾನ ಯಾನ ಸಂಸ್ಥೆ ಸಂತಾಪ ಸೂಚಿಸಿದೆ.

ಇತ್ತೀಚೆಗೆ ಭಾರತೀಯ ಏರ್ ಆಂಬುಲೆನ್ಸ್ ಇಂಧನ ತುಂಬಲು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News