ಬೇಡಿಕೆ ಈಡೇರಿಕೆಗಾಗಿ ಟೊಯೊಟಾ ಕಾರ್ಮಿಕರಿಂದ ಧರಣಿ ಮುಂದುವರಿಕೆ

Update: 2021-03-03 15:51 GMT

ಬೆಂಗಳೂರು, ಮಾ.3: ಕಾರ್ಮಿಕರು ಮುಚ್ಚಳಿಕೆ ಇಲ್ಲದೇ ಕರ್ತವ್ಯಕ್ಕೆ ಹಾಜರಾಗಲು ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪೆನಿ ನೋಟಿಸ್ ನೀಡಿದ್ದರೂ ಉಳಿದ ಬೇಡಿಕೆ ಈಡೇರಿಕೆಗಾಗಿ ಧರಣಿ ಮುಂದುವರಿಸುವುದಾಗಿ ಟೊಯೊಟಾ ಕಾರ್ಮಿಕ ಸಂಘಟನೆ ತಿಳಿಸಿದೆ.       

2020ರ ನ.10ರಿಂದ 2021ರ ಮಾ.1ರವರೆಗಿನ ಲಾಕ್‍ಡೌನ್ ಅವಧಿಗೆ ಪೂರ್ಣ ವೇತನ ನೀಡಬೇಕು. ಈ ಅವಧಿಯ ವಜಾ, ಅಮಾನತು ಆದೇಶ, ಚಾರ್ಜ್‍ಶೀಟ್‍ಗಳನ್ನು ಹಿಂತೆಗೆದುಕೊಳ್ಳಬೇಕು. ವಾರದಲ್ಲಿ 5 ದಿನಗಳ ಕೆಲಸ ಮರುಸ್ಥಾಪನೆ ಮಾಡಬೇಕೆಂದು ಸಂಘಟನೆಯು ಒತ್ತಾಯಿಸಿದೆ.

ಜೊತೆಗೆ ನೇರವಾಗಿ ಉತ್ಪಾದನೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಬಳಸುವುದನ್ನು ನಿಲ್ಲಿಸಬೇಕು. ಯೂನಿಯನ್ ಜತೆ ಕೆಲಸದ ಹೊರೆ ಬಗ್ಗೆ ಮಾತುಕತೆ ಮಾಡಿ ಒಪ್ಪಂದ ಮಾಡಿಕೊಳ್ಳಬೇಕೆಂಬ ಬೇಡಿಕೆ ಈಡೇರದ ಕಾರಣ ಧರಣಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News