72 ಗಂಟೆಯೊಳಗಡೆ ಪೆಟ್ರೋಲ್‌ ಪಂಪ್‌ ಗಳಿಂದ ಮೋದಿ ಭಾವಚಿತ್ರವನ್ನು ತೆರವುಗೊಳಿಸಿ: ಚುನಾವಣಾ ಆಯೋಗ ಆದೇಶ

Update: 2021-03-03 18:09 GMT

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಗಳ ಜಾಹೀರಾತುಗಳನ್ನು 72 ಗಂಟೆಗಳ ಒಳಗಡೆ ಆವರಣದಿಂದ ತೆರವುಗೊಳಿಸುವಂತೆ ಎಲ್ಲಾ ಪೆಟ್ರೋಲ್ ಪಂಪ್ ವಿತರಕರು ಮತ್ತು ಇತರ ಏಜೆನ್ಸಿಗಳಿಗೆ ಚುನಾವಣಾ ಆಯೋಗ (ಇಸಿಐ) ಬುಧವಾರ ನಿರ್ದೇಶನ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.

ಜಾಹೀರಾತು ಹೋರ್ಡಿಂಗ್‌ಗಳಲ್ಲಿ ಪ್ರಧಾನ ಮಂತ್ರಿಯ ಭಾವಚಿತ್ರವನ್ನು ಬಳಸುವುದು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅಧಿಕಾರಿ ತಿಳಿಸಿದ್ದಾರೆ.

ನಿನ್ನೆಯಷ್ಟೇ ತೃಣಮೂಲ ಕಾಂಗ್ರೆಸ್ ನಿಯೋಗ ಇಸಿಐ ಅಧಿಕಾರಿಗಳನ್ನು ಭೇಟಿಯಾಗಿ, ಪಿಎಂ ಮೋದಿಯವರ ಭಾವಚಿತ್ರಗಳನ್ನು ವಿವಿಧ ಕೇಂದ್ರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಹೋರ್ಡಿಂಗ್‌ಗಳಲ್ಲಿ ಬಳಸುವುದು ಹಾಗೂ ಕೋವಿಡ್‌ ವ್ಯಾಕ್ಸಿನ್‌ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರವನ್ನು ಬಳಸುವುದು ಚುನಾವಣಾ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News