ಮೀಸಲಾತಿ ವಿವಾದ ಬಿಜೆಪಿ-ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ: ಸಿದ್ದರಾಮಯ್ಯ

Update: 2021-03-04 09:23 GMT

ಬೆಂಗಳೂರು : ಈಗ ಎದ್ದಿರುವ ಮೀಸಲಾತಿ ವಿವಾದ ಬಿಜೆಪಿ ಮತ್ತು ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ. ಎಚ್ಚರ ವಹಿಸದೆ ಹೋದರೆ ಇವರು ಹಚ್ಚಿರುವ ವಿವಾದದ ಬೆಂಕಿಗೆ ಇವರೇ ಸ್ವಯಂ ಬಲಿಯಾಗಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೀಸಲಾತಿ ಬೇಡಿಕೆಗಳ ಪರಿಶೀಲನೆಗಾಗಿ ಉನ್ನತಾಧಿಕಾರದ ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುತಂತ್ರ ಅಷ್ಟೆ,‌ ಲವಲೇಶದಷ್ಟು ಪ್ರಾಮಾಣಿಕತೆ ಇಲ್ಲ. ಮೀಸಲಾತಿ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸುವ ಪ್ರಾಮಾಣಿಕ ಉದ್ದೇಶ ಮುಖ್ಯಮಂತ್ರಿಗಳು ಹೊಂದಿದ್ದರೆ, ಪೂರ್ಣಗೊಂಡು ಸಿದ್ದ ಇರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಅನುಷ್ಠಾನಗೊಳಿಸಲಿ ಎಂದು ಹೇಳಿದರು.

ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗಗಳ ಬದಲಾವಣೆಯ ಬೇಡಿಕೆಯನ್ನು ಮೀಸಲಾತಿ ಹೆಚ್ಚಳದ ಮೂಲಕ ಮಾತ್ರ ಶಾಶ್ವತವಾಗಿ ಪರಿಹರಿಸಲು ಸಾಧ್ಯ. ರಾಜ್ಯ ಸರ್ಕಾರ‌ ತಕ್ಷಣ ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಒತ್ತಾಯಿಸಬೇಕು. ಈಗ ಎದ್ದಿರುವ ಮೀಸಲಾತಿ ವಿವಾದ ಬಿಜೆಪಿ ಮತ್ತು ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ. ಎಚ್ಚರ ವಹಿಸದೆ ಹೋದರೆ ಇವರು ಹಚ್ಚಿರುವ ವಿವಾದದ ಬೆಂಕಿಗೆ ಇವರೇ ಸ್ವಯಂ ಬಲಿಯಾಗಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News