"ಉದ್ಯೋಗವಿಲ್ಲದಿದ್ದರೆ ವೋಟೂ ಇಲ್ಲ": ಸಾಮಾಜಿಕ ತಾಣದಾದ್ಯಂತ ಟ್ರೆಂಡಿಂಗ್‌

Update: 2021-03-04 11:12 GMT

ಹೊಸದಿಲ್ಲಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಮೋದಿ ಜಾಬ್‌ ದೋ, ಮೋದಿ ರೋಜ್‌ ಗಾರ್‌ ದೋ ಎಂಬ ಹ್ಯಾಶ್‌ ಟ್ಯಾಗ್‌ ಗಳು ಸಾಮಾಜಿಕ ತಾಣದಾದ್ಯಂತ ಟ್ರೆಂಡಿಂಗ್‌ ಆಗಿತ್ತು. ಇದೀಗ ಮತ್ತೊಮ್ಮೆ ʼನೋ ಜಾಬ್‌, ನೋ ವೋಟ್‌ʼ ಟ್ವಿಟರ್‌ ನಾದ್ಯಂತ ಟ್ರೆಂಡಿಂಗ್‌ ಆಗಿದೆ. ಈಗಾಗಲೇ ಲಕ್ಷಕ್ಕೂ ಹೆಚ್ಚು ಟ್ವೀಟ್‌ ಗಳನ್ನು ಮಾಡಲಾಗಿದೆ.

"ಪದವಿಯನ್ನು ಪೂರ್ತಿಗೊಳಿಸಿದವರು ತಮ್ಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಶೀಘ್ರವೇ ಸರಕಾರಿ ಕೆಲಸಕ್ಕೆ ಸೇರಬೇಕೆಂದು ಅವರು ತಯಾರಾಗುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಸರಕಾರದ ಎಲ್ಲ ಸೊತ್ತನ್ನೂ ಖಾಸಗಿಯವರಿಗೆ ಮಾರುತ್ತಿದ್ದಾರೆ" ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾವು ಕೆಲಸ ಇಲ್ಲದೇ ಪರದಾಡುತ್ತಿದ್ದೇವೆ. ಇದಕ್ಕೆ ಕೇವಲ ಸರಕಾರವನ್ನು ದೂರಿ ಪ್ರಯೋಜನವಿಲ್ಲ. ನಾವು ಎರಡು ಬಾರಿ ಮತ ನೀಡಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದೇವೆ. ಇದಕ್ಕೆ ನಾವು ಕೂಡಾ ಕಾರಣವೇ" ಎಂದು ವ್ಯಕ್ತಿಯೋರ್ವರು ಹ್ಯಾಶ್‌ ಟ್ಯಾಗ್‌ ನೊಂದಿಗೆ ಟ್ವೀಟ್‌ ಮಾಡಿದ್ದಾರೆ. "ಈಗ ನೋ ಜಾಬ್‌ ನೋ ವೋಟ್‌ ಎಂದು ಟ್ರೆಂಡ್‌ ಮಾಡುತ್ತಿರುವವರು 2024ರಲ್ಲಿ ಮತ್ತೆ ಮೋದಿಗೆ ಮತ ಚಲಾಯಿಸುತ್ತಾರೆ" ಎಂದು ಇನ್ನೋರ್ವ ಬಳಕೆದಾರರು ಕುಹಕವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News