ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಫೇಸ್‍ಬುಕ್ ಖಾತೆ ಹ್ಯಾಕ್

Update: 2021-03-04 12:28 GMT
ಭಾಸ್ಕರ್ ರಾವ್

ಬೆಂಗಳೂರು, ಮಾ.4: ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರ ಫೇಸ್‍ಬುಕ್ ಖಾತೆ ಹ್ಯಾಕ್ ಆಗಿದ್ದು, ಸಂದೇಶಗಳ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಅವರು ಹೇಳಿದ್ದಾರೆ.

ಈ ಬಗ್ಗೆ  ಸ್ವತಃ ಭಾಸ್ಕರ್ ರಾವ್ ಮಾಹಿತಿ ನೀಡಿದ್ದು, ನನ್ನ ಖಾತೆ ಹ್ಯಾಕ್ ಆಗಿದೆ, ಯಾರಾದರೂ ನನ್ನ ಖಾತೆಯ ಮೂಲಕ ಹಣ ನೀಡಬೇಕೆಂಬ ಸಂದೇಶ ಕಳಿಸಿದ್ದರೆ ದಯವಿಟ್ಟು ಯಾವುದೇ ಹಣವನ್ನು ಕಳುಹಿಸಬೇಡಿ. ನಾನು ನನ್ನ ಖಾತೆ ಹ್ಯಾಕ್ ಆಗಿದ್ದರೂ ಯಾವ ಬಗೆಯಲ್ಲಿಯೂ  ಹಣ ಕೇಳುವುದಿಲ್ಲ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಅಜಯ್ ಕುಮಾರ್ ಸಿಂಗ್ ಹಾಗೂ ಶಂಕರಿ ಬಿದರಿ ಅವರುಗಳ ಇ-ಮೇಲ್ ಖಾತೆಗಳು ಹ್ಯಾಕ್ ಆಗಿ ದುಷ್ಕರ್ಮಿಗಳು ಹಣದ ಬೇಡಿಕೆ ಇಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News