ಸಿಡ್ನಿಯಲ್ಲಿ ಸಿಖ್ಖರ ಮೇಲೆ ದಾಳಿ: ವರದಿ

Update: 2021-03-05 09:42 GMT
Photo Credit: 7NEWS

ಮೆಲ್ಬೋರ್ನ್ : ಸಿಡ್ನಿಯ ಹ್ಯಾರಿಸ್ ಪಾರ್ಕ್‍ನಲ್ಲಿ ಕಳೆದ ರವಿವಾರ ಕೆಲ ಅಪರಿಚಿತ ಸ್ವದೇಶಿ ವ್ಯಕ್ತಿಗಳು ತಮ್ಮ ಮೇಲೆ ಬೇಸ್ ಬಾಲ್ ಬ್ಯಾಟ್, ಕೋಲುಗಳು ಹಾಗೂ ಸುತ್ತಿಗೆಗಳಿಂದ ಹಲ್ಲೆ ನಡೆಸಿದ್ದಾರೆಂದು ಭಾರತೀಯ ಸಿಖ್ಖರ ಒಂದು ತಂಡ ಆರೋಪಿಸಿದೆ. ಭಾರತ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದಲ್ಲಿನ ಭಾರತೀಯ ಸಮುದಾಯದ ನಡುವೆಯೇ ಭಿನ್ನಾಭಿಪ್ರಾಯಗಳು ಉದ್ಭವವಾಗಿರುವ ನಡುವೆಯೇ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.

ಕಾರೊಂದನ್ನು ನಿಲ್ಲಿಸಿ ಈ ಹಲ್ಲೆ ನಡೆಸಲಾಗಿದೆ ಎಂದು  ವರದಿಯಾಗಿದೆ. ಅಷ್ಟೇ ಅಲ್ಲದೆ ದುಷ್ಕರ್ಮಿಗಳು ಕಾರನ್ನು ಗುದ್ದಿ ತಮ್ಮ ಸಿಟ್ಟು ತೀರಿಸಿದ್ದಾರೆ. ತಾವು ಸಿಖ್ಖರ ಶಿರವಸ್ತ್ರ ಧರಿಸಿದ್ದರಿಂದ ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಲ್ಕು ಮಂದಿ ದುಷ್ಕರ್ಮಿಗಳು ಕಾಣಿಸಿದ್ದಾರೆ. ಸಂತ್ರಸ್ತರು ಒಮ್ಮೆ  ತಪ್ಪಿಸಿಕೊಂಡರೂ ಮತ್ತೆ ಅವರನ್ನು ಬೆಂಬತ್ತಿ ಹಲ್ಲೆ ನಡೆಸಲಾಗಿದೆ ಎಂದು ಆಸ್ಟ್ರೇಲಿಯಾದ ಟಿವಿ ವಾಹಿನಿಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News