ಸ್ವಲಾತ್ ವಾರ್ಷಿಕ: ಮಾರ್ಚ್14ರಂದು ನೌಫಳ್ ಸಖಾಫಿ ಕಳಸ ಮೆಲ್ಕಾರ್ ರೆಂಗೇಲ್ ಗೆ

Update: 2021-03-08 18:52 GMT

ಬಂಟ್ವಾಳ, ಮಾ.9: ಬದ್ರಿಯಾ ಜುಮಾ ಮಸ್ಜಿದ್ ರೆಂಗೇಲ್ ನಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಮಾಸಿಕ ಸ್ವಲಾತ್ ಮಜ್ಲಿಸ್ ಇದರ 17ನೇ ವಾರ್ಷಿಕದ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ಮಾರ್ಚ್ 13 ಮತ್ತು 14ರಂದು ನಡೆಯಲಿದೆ. 

ಮಾರ್ಚ್ 13ರಂದು ಶನಿವಾರ ಮಗ್ರಿಬ್ ನಮಾಝ್ ಬಳಿಕ ಬಿ.ಎಚ್ ಅಬೂಸ್ವಾಲಿಹ್ ಉಸ್ತಾದರ ನೇತ್ರತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಮಸೀದಿಯಲ್ಲಿ ನಡೆಯಲಿದ್ದು, ಸ್ಥಳೀಯ ಖತೀಬರಾದ ಹೈದರ್ ಅಲಿ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾರ್ಚ್ 14 ರವಿವಾರ ಮಗ್ರಿಬ್ ನಮಾಝ್ ಬಳಿಕ ಮರ್ಹೂಂ ತಾಜುಲ್ ಉಲಮಾ ಸ್ವದಖತುಲ್ಲಾಹ್ ಉಸ್ತಾದ್ ವೇದಿಕೆಯಲ್ಲಿ ಇಶ್ಖೇ ಮದೀನಾ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಲಿದೆ. ಇಸ್ಮಾಯಿಲ್ ಝುಹ್ರಿ ಗಡಿಯಾರ ನೇತ್ರತ್ವ ನೀಡಲಿದ್ದಾರೆ. ಬದ್ರಿಯಾ ಮದ್ರಸ ಮುಅಲ್ಲಿಂ ಬಶೀರ್ ಮುಸ್ಲಿಯಾರ್ ಉದ್ಘಾಟನೆ ಮಾಡಲಿದ್ದಾರೆ.

ಅದೇ ದಿನ ರಾತ್ರಿ 8:30ಕ್ಕೆ ಆಲಡ್ಕ ಮುದರ್ರಿಸ್ ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮದಲ್ಲಿ ಪ್ರಖ್ಯಾತ ವಾಗ್ಮಿ ನೌಫಳ್ ಸಖಾಫಿ ಕಳಸ ಬ್ಯಾರಿ ಭಾಷೆಯಲ್ಲಿ ಮುಖ್ಯ ಪ್ರಭಾಷಣ ಮಡಲಿದ್ದಾರೆ. ಸ್ಥಳೀಯ ಖತೀಬರಾದ ಹೈದರ್ ಅಲಿ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.

ವೇದಿಕೆಯಲ್ಲಿ ಬಿ.ಜೆ.ಎಂ ರೆಂಗೇಲ್ ಅಧ್ಯಕ್ಷ ಅಬ್ದುಲ್ ಕರೀಮ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ರೆಂಗೇಲ್, ಮಾಜಿ ಅಧ್ಯಕ್ಷ ಪಿ.ಆರ್ ಇದ್ದಿನಬ್ಬ ಹಾಗೂ ಬದ್ರಿಯಾ ಯೂತ್ ವಿಂಗ್ ಗೌರವಾಧ್ಯಕ್ಷ ಪಿ.ಆರ್ ಯೂಸುಫ್ ಇಲ್ಯಾಸ್ ಉಪಸ್ಥಿತಲಿರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News