ಸಿರಿಯ ಆಸ್ಪತ್ರೆಯ ಮೇಲೆ ಸರಕಾರಿ ಪಡೆಗಳ ಶೆಲ್ ದಾಳಿ: 5 ನಾಗರಿಕರ ಹತ್ಯೆ

Update: 2021-03-21 18:45 GMT

ಬೈರೂತ್,ಮಾ.21: ವಾಯವ್ಯ ಸಿರಿಯದ ಬಂಡುಕೋರ ನಿಯಂತ್ರಿತ ಪಟ್ಟಣದ ಆಸ್ಪತ್ರೆಯ ಮೇಲೆ ಸರಕಾರಿ ಪಡೆಗಳು ನಡೆಸಿದ ಫಿರಂಗಿ ಶೆಲ್ ದಾಳಿಯಲ್ಲಿ ಕನಿಷ್ಠ ಐವರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ವೈದ್ಯಕೀಯ ಸಿಬ್ಬಂದಿ,ರಕ್ಷಣಾ ಕಾರ್ಯಕರ್ತರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಸಿರಿಯದ ಪಶ್ಚಿಮ ಅಲೆಪ್ಪೊ ಪ್ರಾಂತದ ಪಟ್ಟಣವಾದ ಅತಾರೆಬ್‌ನ ಆಸ್ಪತ್ರೆ ಪ್ರವೇಶದ್ವಾರ ಹಾಗೂ ಪ್ರಾಂಗಣದ ಮೇಲೆ ಫಿರಂಗಿ ಶೆಲ್‌ಗಳು ಅಪ್ಪಳಿಸಿರುವುದಾಗಿ ಬ್ರಿಟನ್‌ನಿಂದ ಕಾರ್ಯಾಚರಿಸುತ್ತಿರವ ಮಾನವಹಕ್ಕುಗಳಿಗಾಗಿನ ಸಿರಿಯನ್ ವೀಕ್ಷಣಾಲಯ ತಿಳಿಸಿದೆ. ಅತಾರೆಬ್ ಪಟ್ಟಣವು ಸರಕಾರಿ ವಿರೋಧಿ ಬಂಡುಕೋರರ ಹಿಡಿತದಲ್ಲಿದೆ.

ಸರಕಾರಿ ಪಡೆಗಳ ದಾಳಿಯನ್ನು ತಪ್ಪಿಸಲು ಈ ಆಸ್ಪತ್ರೆಯು ನೆಲಮಾಳಿಗೆಯಲ್ಲಿ ಕಾರ್ಯಾಚರಿಸುತ್ತಿತ್ತು. ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಓರ್ವ ಮಗು ಹಾಗೂ ಮಹಿಳೆ ಸೇರಿದ್ದಾರೆ.

2020ರ ಫೆಬ್ರವರಿಯಿಂದೀಚೆಗೆ ಬಂಡುಕೋರ ನಿಯಂತ್ರಣದ ಪಶ್ಚಿಮ ಅಲೆಪ್ಪೊ ಪ್ರಾಂತದಲ್ಲಿರುವ ವೈದ್ಯಕೀಯ ಸಂಸ್ಥಾಪನೆಯೊಂದರ ಮೇಲೆ ನಡೆದ ಪ್ರಥಮ ದಾಳಿ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News