ವಿದ್ಯಾರ್ಥಿ ಹೋರಾಟಗಾರ್ತಿ ವಿರುದ್ಧ ಅವಹೇಳನಕಾರಿ ಹೇಳಿಕೆ: ನಟಿಯ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ

Update: 2021-04-06 15:52 GMT

ಹೊಸದಿಲ್ಲಿ, ಎ. 6: ವಿದ್ಯಾರ್ಥಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸಫೂರಾ ಝರ್ಗರ್ ಕುರಿತು ಅವಹೇಳನಕಾರಿ ಟ್ವೀಟ್‌ಗಳನ್ನು ಮಾಡಿದ ಬಾಲಿವುಡ್ ನಟಿ ಪಾಯಲ್ ರೋಹ್ಟಗಿ ವಿರುದ್ಧ ಪೊಲೀಸ್ ತನಿಖೆಗೆ ಮುಂಬೈ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ನಟಿ ಪಾಯಲ್ ರೋಹ್ಟಗಿ ಅವರ ಟ್ವೀಟ್‌ಗಳು ಮೇಲ್ನೋಟಕ್ಕೆ ಮುಸ್ಲಿಮ್ ಮಹಿಳೆ ಹಾಗೂ ಮಸ್ಲಿಂ ಸಮುದಾಯದ ಬಗ್ಗೆ ನಿರ್ಲಕ್ಷವನ್ನು ಸೂಚಿಸಿದೆ ಎಂದು ಮುಂಬೈಯ ಅಂಧೇರಿ ಉಪ ನಗರದ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ.

ಇತರ ಸಮುದಾಯದ ಸಂಪ್ರದಾಯ, ಪದ್ಧತಿಯನ್ನು ಅಪಹಾಸ್ಯ ಮಾಡುವ ಹಕ್ಕು ಯಾವೊಬ್ಬ ವ್ಯಕ್ತಿಗೂ ಇಲ್ಲ ಎಂದು ಆದೇಶ ಹೇಳಿದೆ. ‘‘ಆರೋಪಿಗಳ ವಿರುದ್ಧ ಮುಂದುವರಿಯಲು ಟ್ವೀಟ್‌ಗಳ ಕುರಿತ ತಾಂತ್ರಿಕ ತನಿಖೆ ಅತ್ಯಗತ್ಯ. ಇಂತಹ ತನಿಖೆಯನ್ನು ಪೊಲೀಸರು ಮಾತ್ರ ನಡೆಸಲು ಸಾಧ್ಯ’’ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News