ವ್ಯೋಸಾ ಉಸ್ಮಾನಿ ಕೊಸೊವೊದ ನೂತನ ಅಧ್ಯಕ್ಷೆ

Update: 2021-04-06 18:49 GMT
ಫೋಟೊ ಕೃಪೆ ://twitter.com/RKSinThailand

ಪ್ರಿಸ್ಟೀನ (ಕೊಸೊವೊ), ಎ. 6: ಕೊಸೊವೊ ದೇಶದ ಸಂಸದರು ವಕೀಲೆ ವ್ಯೋಸಾ ಉಸ್ಮಾನಿಯನ್ನು ದೇಶದ ನೂತನ ಅಧ್ಯಕ್ಷೆಯನ್ನಾಗಿ ಆರಿಸಿದ್ದಾರೆ. ಇದರೊಂದಿಗೆ ಈ ವರ್ಷ ಎರಡನೇ ಬಾರಿಗೆ ಉಂಟಾಗಬಹುದಾಗಿದ್ದ ರಾಜಕೀಯ ಬಿಕ್ಕಟ್ಟೊಂದನ್ನು ನಿವಾರಿಸಿದ್ದಾರೆ.

38 ವರ್ಷದ ವ್ಯೋಸಾ, ಕೊಸೊವೊ ದೇಶವು 13 ವರ್ಷಗಳ ಹಿಂದೆ ಸರ್ಬಿಯ ದೇಶದಿಂದ ಸ್ವತಂತ್ರಗೊಂಡಂದಿನಿಂದ ಆ ದೇಶದ ಐದನೇ ಹಾಗೂ ಎರಡನೇ ಮಹಿಳಾ ಸರಕಾರಿ ಮುಖ್ಯಸ್ಥರಾಗಿದ್ದಾರೆ.

ಫೆಬ್ರವರಿ 14ರಂದು ನಡೆದ ಮಧ್ಯಾಂತರ ಚುನಾವಣೆಯಲ್ಲಿ ಆಲ್ಬಿನ್ ಕುರ್ತಿಯ ವೆಟೆವೆಂಡೋಸ್ಯೆ ಪಕ್ಷವು ಭರ್ಜರಿ ಬಹುಮತದಿಂದ ವಿಜಯಿಯಾಗಿತ್ತು. ಪಕ್ಷವು ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ವ್ಯೋಸಾರನ್ನು ಅಧ್ಯಕ್ಷ ಹುದ್ದೆಗೆ ನೇಮಿಸಿತ್ತು.

ಸಂಸತ್ತಿನಲ್ಲಿ ರವಿವಾರ ನಡೆದ ಮತದಾನದಲ್ಲಿ ಸಂಸದರು ಅವರನ್ನು ಅಧ್ಯಕ್ಷರನ್ನಾಗಿ ಆರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News