ಬಂಗಾಳದ ಹಿಂಸಾಚಾರಕ್ಕೆ ಚುನಾವಣಾ ಆಯೋಗವನ್ನು ಹೊಣೆಯಾಗಿಸಬೇಕು: ಚಿದಂಬರಂ

Update: 2021-04-10 13:53 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಹಿರಿಯ ಪೊಲೀಸ್ ಅಧಿಕಾರಿಗಳ ‘ದೊಡ್ಡ ಪ್ರಮಾಣದ ವರ್ಗಾವಣೆ ಹಾಗೂ  ಪೋಸ್ಟಿಂಗ್’ಗಳನ್ನು ಮಾಡಿರುವುದರಿಂದ ಸಿತಾಲ್ಕುಚಿಯಲ್ಲಿ ಶನಿವಾರ ನಡೆದ ಹಿಂಸಾಚಾರಕ್ಕೆ ಆಯೋಗವನ್ನೇ ಹೊಣೆಯಾಗಿಸಬೇಕು ಎಂದು ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಶನಿವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

"ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯ ಸಮಯದಲ್ಲಿ ಮತದಾನದ ದಿನದಂದು ಪೊಲೀಸರು ಗುಂಡು ಹಾರಿಸಿ ನಾಲ್ವರನ್ನು ಸಾಯಿಸಿರುವ  ಪ್ರಕರಣ ವರದಿಯಾಗಿರುವುದು ನನಗೆ ನೆನಪಿಲ್ಲ" ಎಂದು ಚಿದಂಬರಂ ಹೇಳಿದರು.

ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು: ಸಿಪಿಎಂ ಒತ್ತಾಯ

ಸಿಟಾಲ್‌ಕುಚಿ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಸಿಪಿಎಂ  ಪಾಲಿಟ್‌ಬ್ಯುರೊ ಸದಸ್ಯ ಎಂ.ಡಿ. ಸಲೀಂ ಅವರು ಶನಿವಾರ ಒತ್ತಾಯಿಸಿದರು.

"ಕೇಂದ್ರ ಅರೆಸೈನಿಕ ಪಡೆಗಳ ಗುಂಡಿನ ದಾಳಿ ಮತ್ತು ಹತ್ಯೆಯ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಪದೇ ಪದೇ ಬೆಂಬಲಿಗರನ್ನು ಕೆರಳಿಸುತ್ತಿದ್ದರು ಅವರು ಸಿಟಾಲ್ಕುಚಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News