ಮಾರಕಾಸ್ತ್ರಗಳನ್ನು ಹೊಂದಿದ ಆರೋಪ: ವಿಮಾನ ನಿಲ್ದಾಣದಲ್ಲಿ ಗರ್ಭಿಣಿ ಮಹಿಳೆ ವಶಕ್ಕೆ

Update: 2021-04-10 14:24 GMT

ಬೆಂಗಳೂರು, ಎ.10: ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಸ್ಸಾಂ ಗುವಾಹಟಿಗೆ ಪ್ರಯಾಣ ಬೆಳೆಸುವಾಗ ಮಾರಕಾಸ್ತ್ರಗಳನ್ನು ಹೊಂದಿದ ಆರೋಪದಡಿ ಗರ್ಭಿಣಿ ಮಹಿಳೆಯನ್ನು ಕೆಐಎಎಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಮಾದೇವಿ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎ.8ರ ಬೆಳಗ್ಗೆ 5.20ಕ್ಕೆ ಇಂಡಿಗೋ ವಿಮಾನದಲ್ಲಿ ನಗರದಿಂದ ಗುವಾಹಟಿಗೆ ಉಮಾದೇವಿ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಪ್ರಯಾಣ ಬೆಳೆಸಿದ್ದಳು.

ಕೇಂದ್ರ ಕೈಗಾರಿಕಾ ಭದ್ರತಾಪಡೆ (ಸಿಐಎಸ್‍ಎಫ್) ಪ್ರಯಾಣಿಕರನ್ನು ತಪಾಸಣೆ ಮಾಡುವ ಸಮಯದಲ್ಲಿ ಉಮಾದೇವಿ ನಡೆ ಅನುಮಾನಾಸ್ಪದವಾಗಿತ್ತು. ಅವರನ್ನು ಸಿಐಎಸ್‍ಎಫ್ ಸಿಬ್ಬಂದಿ ತಪಾಸಣೆ ನಡೆಸಿದಾಗ ಮಾರಕಾಸ್ತ್ರಗಳು ಹೊಂದಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಆಕೆಯನ್ನು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News