ಕೆಂಪುಕೋಟೆ ಹಿಂಸಾಚಾರದ ಆರೋಪಿ ದೀಪ್ ಸಿಧುಗೆ ಜಾಮೀನು ಮಂಜೂರು

Update: 2021-04-17 07:06 GMT

ಹೊಸದಿಲ್ಲಿ:ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ದಿಲ್ಲಿ ಕೆಂಪುಕೋಟೆ ಸಂಕೀರ್ಣದಲ್ಲಿ ನಡೆದ ಹಿಂಸಾಚಾರ ಘಟನೆಯ ಆರೋಪಿ,  ನಟ ದೀಪ್ ಸಿಧುಗೆ ದಿಲ್ಲಿ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

36ರ ಹರೆಯದ ಸಿಧುವನ್ನು ಫೆ.9ರಂದು ದಿಲ್ಲಿಯಿಂದ 100 ಕಿ.ಮೀ.ದೂರದಲ್ಲಿರುವ ಹರ್ಯಾಣದ ಕರ್ನಲ್ ನಿಂದ ಬಂಧಿಸಲಾಗಿತ್ತು.  ದಿಲ್ಲಿ ಹಿಂಸಾಚಾರ ಘಟನೆ ನಡೆದು ಹಲವು ದಿನಗಳ ಬಳಿಕ ಸಿಧುವನ್ನು ಬಂಧಿಸಲಾಗಿತ್ತು. ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಚಳವಳಿಯ ಹಾದಿ ತಪ್ಪಿಸಲು ಸಿಧು ಯತ್ನಿಸಿದ್ದಾನೆ ಎಂದು ರೈತ ಮುಖಂಡರು ಆರೋಪಿಸಿದ್ದರು. 

ತಲಾ 30,000 ರೂ.ಗಳ ಎರಡು ಶೂರಿಟಿ ಇರುವ ವೈಯಕ್ತಿಕ ಬಾಂಡ್‍ಗೆ ಸಹಿ ಹಾಕುವ ಷರತ್ತಿನೊಂದಿಗೆ ದಿಲ್ಲಿ ನ್ಯಾಯಾಲಯವು ಸಿಧುಗೆ ಜಾಮೀನು ನೀಡಿದೆ. ತನ್ನ ಪಾಸ್ ಪೋರ್ಟ್‍ಗಳನ್ನು ಸಲ್ಲಿಸಲು ಹಾಗೂ ತನಿಖಾಧಿಕಾರಿಗಳೊಂದಿಗೆ ಸಹಕರಿಸುವಂತೆ ಸಿಧುಗೆ ನ್ಯಾಯಾಲಯವು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News