ಬಾಂಗ್ಲಾ: ಚೀನಾ ಹೂಡಿಕೆಯ ವಿದ್ಯುತ್ ಸ್ಥಾವರದಲ್ಲಿ ಪ್ರತಿಭಟನೆ

Update: 2021-04-17 15:54 GMT

ಢಾಕಾ (ಬಾಂಗ್ಲಾದೇಶ), ಎ. 17: ಚೀನಾ ಹೂಡಿಕೆಯ ವಿದ್ಯುತ್ ಸ್ಥಾವರವೊಂದರ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಲಸಗಾರರ ಮೇಲೆ ಶನಿವಾರ ಬಾಂಗ್ಲಾದೇಶ ಪೊಲೀಸರು ಗೋಲಿಬಾರ್ ನಡೆಸಿದಾಗ ಕನಿಷ್ಠ ಐವರು ಮೃತಪಟ್ಟಿದ್ದಾರೆ ಹಾಗೂ ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲಸಗಾರರು ಹಿಂಸೆಗೆ ಇಳಿದಾಗ ಪೊಲೀಸರು ಗೋಲಿಬಾರ್ ನಡೆಸಿದರು ಎಂದು ದಕ್ಷಿಣ ಕರಾವಳಿಯ ಪಟ್ಟಣ ಬನ್ಶ್‌ಖಾಲಿಯ ಸರಕಾರಿ ಆಡಳಿತಾಧಿಕಾರಿ ಸೈದುಸ್ಮಾನ್ ಚೌಧುರಿ ತಿಳಿಸಿದರು.

ಬಾಕಿಯಿರುವ ವೇತನ ನೀಡಬೇಕು, ಕೆಲಸದ ಅವಧಿಯನ್ನು ಕಡಿತಗೊಳಿಸಬೇಕು ಹಾಗೂ ತಾರತಮ್ಯವನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಕೆಲಸಗಾರರು ಧರಣಿ ನಡೆಸುತ್ತಿದ್ದರು.

ಸುಮಾರು 2,000ದಷ್ಟಿದ್ದ ಪ್ರತಿಭಟನಕಾರರು ಪೊಲೀಸರತ್ತ ಕಲ್ಲೆಸೆದರು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗುಂಡು ಹಾರಿಸಿದರು ಎಂದು ನಗರದ ಪೊಲೀಸ್ ಮುಖ್ಯಸ್ಥ ಅಝೀಝುಲ್ ಇಸ್ಲಾಮ್ ಹೇಳಿದರು.

1,200 ಮೆಗಾವಾಟ್ ಸಾಮರ್ಥ್ಯದ ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿ ಹಿಂದೆಯೂ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News