ಮಲಹೊರುವ ಪದ್ದತಿ ನಿರ್ಮೂಲನೆಗೆ ರೊಬೋಟ್ ಯಂತ್ರ ಬಳಕೆಯಾಗಲಿ: ಹಿರಿಯ ವಕೀಲ ಎಂ.ಜೇಮ್ಸ್

Update: 2021-04-18 17:37 GMT

ಬೆಂಗಳೂರು, ಎ.18: ರಾಜ್ಯದಲ್ಲಿ ಮಲಹೊರುವ ಪದ್ದತಿ ಶಾಶ್ವತವಾಗಿ ನಿರ್ಮೂಲನೆ ಮಾಡಲು ರೊಬೋಟ್ ಯಂತ್ರಗಳನ್ನು ಬಳಕೆ ಮಾಡುವುದೊಂದೆ ಪರಿಹಾರವೆಂದು ಹಿರಿಯ ವಕೀಲ ಎಂ.ಜೇಮ್ಸ್ ಅಭಿಪ್ರಾಯಿಸಿದ್ದಾರೆ.

ರವಿವಾರ ಬೆಂಗಳೂರು ದಲಿತ್ ಫೋರಂ ವತಿಯಿಂದ ಆಯೋಜಿಸಿದ್ದ ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ಕ್ರಿಯಾಯೋಜನೆಗಳು ಎಂಬ ವಿಷಯದ ಕುರಿತು ಮಾತನಾಡಿದ ಅವರು, ಪ್ರತಿ ನಾಲ್ಕು ದಿನಕ್ಕೆ ಒಬ್ಬ ಪೌರಕಾರ್ಮಿಕರು ಮಲಗುಂಡಿಗೆ ಇಳಿದು ಸಾವನ್ನಪ್ಪುತ್ತಿದ್ದಾರೆ. ಆದರೂ ಈ ಬಗ್ಗೆ ನಮ್ಮ ಅಡಳಿತ ವರ್ಗಕ್ಕೆ ಗಂಭೀರತೆಯೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ರೊಬೋಟ್ ಯಂತ್ರಗಳ ಮೂಲಕ ಮಲದ ಗುಂಡಿಗಳನ್ನು ಸ್ವಚ್ಚ ಮಾಡುವಂತಹ ಕಾರ್ಯ ನಡೆಯುತ್ತಿದೆ. ದೇಶದ ಇತರೆ ನಗರಪಾಲಿಕೆಗಳಲ್ಲೂ ಕೇರಳ ಮಾದರಿಯಲ್ಲಿ ಯಂತ್ರಗಳನ್ನು ಬಳಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ಯಂತ್ರ ಬಳಕೆಯಾಗುತ್ತಿಲ್ಲ. ರಾಜ್ಯ ಸರಕಾರಕ್ಕೆ ಈ ಬಗ್ಗೆ ಆಸಕ್ತಿಯಿಲ್ಲ.  ಹೀಗಾಗಿ ಆಸಕ್ತರು ಈ ಯಂತ್ರಗಳನ್ನು ಕೊಂಡು ಸರಕಾರಕ್ಕೆ ಬಾಡಿಗೆ ಕೊಡುವುದರ ಮೂಲಕ ಮಲದ ಗುಂಡಿಗೆ ಮನಷ್ಯನನ್ನು ಇಳಿಸುವುದನ್ನು ತಪ್ಪಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ 70-80ರಲ್ಲಿ ದಲಿತ ಚಳವಳಿಯನ್ನು ರೂಪಗೊಂಡ ಬಗೆ, ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದವರ ವಿವರಗಳನ್ನು ದಾಖಲಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡಿ ಅಧ್ಯಯನಕ್ಕೆ ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಅಂಬೇಡ್ಕರ್ ಕುರಿತು ಇಂಗ್ಲಿಷ್‍ನಲ್ಲಿ ಸಾಕಷ್ಟು ಬರಹಗಳಿದ್ದು, ಅವೆಲ್ಲವೂ ಕನ್ನಡಕ್ಕೆ ಅನುವಾದಗೊಳ್ಳಬೇಕಾಗಿದೆ. ಹೀಗಾಗಿ ದಲಿತ ಸಮುದಾಯದ ಯುವಜನತೆಗೆ ಅನುವಾದ ಕ್ಷೇತ್ರದಲ್ಲಿ ವಿಫುಲವಾದ ಅವಕಾಶಗಳಿದ್ದು, ಅವುಗಳೆಲ್ಲವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಜೈಲುಗಳಲ್ಲಿ ಶೇ.60ರಷ್ಟು ದಲಿತ ಜನರೆ ಇದ್ದಾರೆ. ನಾನಾ ಕಾರಣಗಳಿಗಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇವರಲ್ಲಿ ಹಲವು ಮಂದಿಗೆ ಬೇಲ್‍ಗೆ ಹಣ ಒದಗಿಸಲು ಸಾಧ್ಯವಾಗದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೀಗಾಗಿ ಬೇಲ್‍ಗಾಗಿ ಹಣವನ್ನು ಒಟ್ಟುಗೂಡಿಸಿ, ದಲಿತ ಯುವಕರನ್ನು ಜೈಲಿನಿಂದ ಹೊರತರಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಈ ವೇಳೆ ಬೆಂಗಳೂರು ದಲಿತ ಫೋರಂನ ಅಧ್ಯಕ್ಷ ಗಜೇಂದ್ರ, ಸಾಮಾಜಿಕ ಹೋರಾಟಗಾರ ಮಂಗಳೂರು ವಿಜಯ ಮತ್ತಿತರರಿದ್ದರು.

ದಲಿತ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಹಿಂದೂ ಧರ್ಮದಿಂದ ಹೊರಬಂದು ಬೌದ್ಧ ದಮ್ಮವನ್ನು ಸ್ವೀಕರಿಸುವುದೊಂದೇ ಮಾರ್ಗವಾಗಿದೆ. ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಬುದ್ಧ ತತ್ವಗಳನ್ನು ಪಾಲಿಸುವ ಮೂಲಕ ದಲಿತ ಕುಟುಂಬಗಳು ಶಿಕ್ಷಿತರು, ಸ್ವಾಭಿಮಾನಿ ಜೀವನದೆಡೆಗೆ ಸಾಗಬೇಕಾಗಿದೆ.

-ಜೇಮ್ಸ್, ಹಿರಿಯ ವಕೀ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News