ಅಸ್ಸಾಂ: ಸಿಲ್ಚಾರ್ ವಿಮಾನ ನಿಲ್ದಾಣದಿಂದ 300 ಪ್ರಯಾಣಿಕರು ಕೊರೋನ ಪರೀಕ್ಷೆ ತಪ್ಪಿಸಿ ಪರಾರಿ

Update: 2021-04-22 18:30 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಎ. 22: ಅಸ್ಸಾಂನ ಕಾಚರ್ ಇಲ್ಲೆಯ ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ಬುಧವಾರ ಆಗಮಿಸಿದ ಸುಮಾರು 300 ಪ್ರಯಾಣಿಕರು ಕಡ್ಡಾಯ ಕೋವಿಡ್ ಪರೀಕ್ಷೆಯನ್ನು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಕಾಚರ್ ಜಿಲ್ಲಾಡಳಿತ ತನಿಖೆ ಆರಂಭಿಸಿದೆ. ಕೋವಿಡ್-19 ಪರೀಕ್ಷೆಗೆ ಒಳಗಾಗದೆ ಪರಾರಿಯಾದವರ ವಿರುದ್ಧ ಎಫ್ಐಆರ್ ದಾಖಲಿಸಲು ಅದು ಸಿದ್ಧತೆ ನಡೆಸುತ್ತಿದೆ. 

ಬುಧವಾರ 690 ಜನರು ಸಿಲ್ಚಾರ್ನಲ್ಲಿ ಇಳಿದಿದ್ದರು. ಕೆಲವರು ಇತರ ಈಶಾನ್ಯ ರಾಜ್ಯಗಳಿಗೆ ಪ್ರಯಾಣಿಸುವರಾದುದರಿಂದ ವಿನಾಯತಿ ನೀಡಲಾಗಿತ್ತು. ಒಟ್ಟು 189 ಪ್ರಯಾಣಿಕರನ್ನು ಪರೀಕ್ಷೆ ನಡೆಸಲಾಯಿತು. ಇವರಲ್ಲಿ 6 ಮಂದಿಗೆ ಪಾಸಿಟಿವ್ ವರದಿ ಬಂದಿತ್ತು ಎಂದು ಕಾಚರ್ ಜಿಲ್ಲೆಯ ಆರೋಗ್ಯ ಇಲಾಖೆಯ ಎಡಿಸಿ ಸುಮಿತ್ ಸಟ್ವಾನ್ ತಿಳಿಸಿದ್ದಾರೆ.
ಸುಮಾರು 300 ಪ್ರಯಾಣಿಕರು ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ವಾಸ್ತವವಾಗಿ ಏನು ನಡೆದಿದೆ ಎಂದು ತಿಳಿಯಲು ಅವರು ಹೇಗೆ ಪರಾರಿಯಾದರು ಹಾಗೂ ಇತರ ವಿವರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಂಬಂಧಿತ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News