ಭಾರತ,ಪಾಕಿಸ್ತಾನದ ವಿಮಾನಗಳಿಗೆ ನಿಷೇಧ ವಿಧಿಸಿದ ಕೆನಡಾ

Update: 2021-04-23 17:11 GMT

 ಒಟ್ಟಾವ (ಕೆನಡ), ಎ. 23: ಕೆನಡವು ಗುರುವಾರ ಭಾರತ ಮತ್ತು ಪಾಕಿಸ್ತಾನಗಳಿಂದ ಬರುವ ಎಲ್ಲ ಪ್ರಯಾಣಿಕ ವಿಮಾನಗಳನ್ನು ಒಂದು ತಿಂಗಳ ಕಾಲ ನಿಷೇಧಿಸಿದೆ ಎಂದು ಸಾರಿಗೆ ಸಚಿವ ಉಮರ್ ಅಲ್-ಗಾಬ್ರಾ ಪ್ರಕಟಿಸಿದ್ದಾರೆ.

ಈ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಪತ್ತೆಯಾಗುತ್ತಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

‘‘ಭಾರತ ಮತ್ತು ಪಾಕಿಸ್ತಾನಗಳಿಂದ ಕೆನಡಕ್ಕೆ ಬರುವ ವಿಮಾನಯಾನಿಗಳಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಈ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕ ಮತ್ತು ಖಾಸಗಿ ವಿಮಾನಗಳನ್ನು 30 ದಿನಗಳ ಕಾಲ ನಾನು ಅಮಾನತಿನಲ್ಲಿಟ್ಟಿದ್ದೇನೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮರ್ ತಿಳಿಸಿದರು.

ನಿಷೇಧವು ಭಾರತೀಯ ಕಾಲಮಾನ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.

ಆದರೆ ನಿಷೇಧವು ಸರಕು ವಿಮಾನಗಳಿಗೆ ಅನ್ವಯವಾಗುವುದಿಲ್ಲ ಎಂದು ಅವರು ನುಡಿದರು. ಲಸಿಕೆಗಳು, ವೈಯಕ್ತಿಕ ಸುರಕ್ಷತಾ ಉಪಕರಣಗಳು ಮತ್ತು ಇತರ ಅವಶ್ಯಕ ವಸ್ತುಗಳ ನಿರಂತರ ಸಾಗಾಟಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News