ಬಿಬಿಎಂಪಿ ವ್ಯಾಪ್ತಿಯಲ್ಲಿ 1,951 ಹಾಸಿಗೆ ಸಾಮರ್ಥ್ಯದ 12 ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ

Update: 2021-04-23 12:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 10 ಆರೈಕೆ ಕೇಂದ್ರಗಳನ್ನು ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ(CHBMS)ನಲ್ಲಿ ಹಾಸಿಗೆಗಳ ಮಾಹಿತಿ ಅಳವಡಿಸಲಾಗಿರುತ್ತದೆ.

ಈಗ ಕಾರ್ಯನಿರ್ವಹಿಸುತ್ತಿರುವ 10 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 1,601 ಹಾಸಿಗೆಗಳ ಸಾಮರ್ಥ್ಯವಿದೆ. ಈ ಪೈಕಿ ಇದುವರೆಗೆ 546 ಮಂದಿ ಕೋವಿಡ್ ಸೋಂಕಿತರು ಆರೈಕೆ ಪಡೆಯುತ್ತಿದ್ದು, 1,055 ಹಾಸಿಗೆಗಳು ಖಾಲಿಯಿವೆ. ಉಳಿಕೆ 2 ಕೋವಿಡ್ ಆರೈಕೆ ಕೇಂದ್ರಗಳನ್ನು ನಾಳೆ(ಎ.24)ಯಿಂದ ಪ್ರಾರಂಭಿಸಿ ಅದರ ಮಾಹಿತಿಯನ್ನು ಕೂಡಾ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ ಹಾಸಿಗೆಗಳ ಮಾಹಿತಿ ಅಳವಡಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಆರೈಕೆ ಕೇಂದ್ರಗಳ ವಿವರ: ಬೆಂಗಳೂರು ದಕ್ಷಿಣ ವಲಯದ ಆಡುಗೋಡಿ ಬಾಷ್ ಸ್ಟೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ 80 ಹಾಸಿಗೆವುಳ್ಳ ಆರೋಗ್ಯ ಕೇಂದ್ರ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 100 ಹಾಸಿಗೆ ಸಾಮರ್ಥ್ಯದ ಆರೋಗ್ಯ ಕೇಂದ್ರವಿದೆ. ಇಂದಿನವರೆಗೆ(ಎ.23) ಈ ಎರಡು ಕೇಂದ್ರಗಳಲ್ಲೂ ಅಷ್ಟು ಹಾಸಿಗೆಗಳು ಖಾಲಿಯಿವೆ.

ಬೆಂಗಳೂರು ಪಶ್ಚಿಮ ಭಾಗದಲ್ಲಿ ಸರಕಾರಿ ಆಯುರ್ವೇದ ಮತ್ತು ವೈದ್ಯಕೀಯ ಕಾಲೇಜಿನಲ್ಲಿ 201 ಹಾಸಿಗೆವುಳ್ಳ ಆರೋಗ್ಯ ಕೇಂದ್ರದಲ್ಲಿ 7 ಹಾಸಿಗೆಗಳು ಭರ್ತಿಯಾಗಿದ್ದು, 194 ಹಾಸಿಗೆಗಳು ಖಾಲಿಯಿವೆ. ಹಾಗೆಯೇ ಬೆಂಗಳೂರು ಪೂರ್ವ ಭಾಗದಲ್ಲಿ ಹೆಬ್ಬಾಳದ ಮಂಗಳ ರೈತ ಭವನದಲ್ಲಿ 60 ಹಾಸಿಗೆವುಳ್ಳ ಆರೋಗ್ಯ ಕೇಂದ್ರ ತೆರೆಯಲಾಗಿದ್ದು, ಅಷ್ಟೂ ಹಾಸಿಗೆಗಳು ಖಾಲಿಯಿವೆ.

ಯಲಹಂಕ ಭಾಗದಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‍ನಲ್ಲಿ 50 ಹಾಸಿಗೆವುಳ್ಳ ಆರೈಕೆ ಕೇಂದ್ರವಿದ್ದು, ಅಷ್ಟು ಹಾಸಿಗೆ ಖಾಲಿಯಿದೆ. ಹಾಗೂ ಯಲಹಂಕದ ಹಜ್ ಭವನದಲ್ಲಿ 400 ಹಾಸಿಗೆವುಳ್ಳ ಆರೈಕೆ ಕೇಂದ್ರದಲ್ಲಿ 381 ಹಾಸಿಗೆಗಳು ಭರ್ತಿಯಾಗಿದ್ದು, 19 ಖಾಲಿಯಿವೆ.

ಮಹದೇವಪುರ ಭಾಗದ ನವ್ಯಾ ಇಂಟರ್ ನ್ಯಾಷನಲ್‍ನಲ್ಲಿ 112 ಹಾಸಿಗೆವುಳ್ಳ ಆರೈಕೆ ಕೇಂದ್ರದಲ್ಲಿ ಒಂದು ಹಾಸಿಗೆ ಮಾತ್ರ ಭರ್ತಿಯಾಗಿದೆ. ಎಚ್‍ಎಎಲ್ ಆರೈಕೆ ಕೇಂದ್ರದಲ್ಲಿ 178 ಹಾಸಿಗೆಗಳಲ್ಲಿ 157 ಭರ್ತಿಯಾಗಿದೆ. ಹಾಗೂ ಆರ್‍ಆರ್‍ನಗರದ ಎನ್‍ಇಆರ್‍ಬಿಎಚ್ ಜ್ಞಾನ ಭಾರತಿ ಕ್ಯಾಂಪಸ್‍ನಲ್ಲಿ 370 ಹಾಸಿಗೆವುಳ್ಳ ಆರೈಕೆ ಕೇಂದ್ರದಲ್ಲಿ ಎಲ್ಲ ಹಾಸಿಗೆಗಳು ಖಾಲಿಯಿವೆ. ವಿಂಟೇಜ್ ಬ್ಲಾಸಮ್ ಆರೈಕೆ ಕೇಂದ್ರದಲ್ಲಿ 50 ಹಾಸಿಗೆಗಳಿದ್ದು, ಅಷ್ಟು ಖಾಲಿಯಿವೆ ಎಂದು ಬಿಬಿಎಂಪಿ ಪ್ರಕಟನೆಯಲ್ಲಿ ತಿಳಿಸಿದೆ.

ಈಗ ಕಾರ್ಯನಿರ್ವಹಿಸುತ್ತಿರುವ 10 ಕೋವಿಡ್ ಆರೈಕೆ ಕೇಂದ್ರಗಳಲ್ಲಿರುವ 1,601 ಹಾಸಿಗೆಗಳಲ್ಲಿ ಕೇವಲ 546 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1055 ಹಾಸಿಗೆಗಳು ಖಾಲಿಯಿವೆ. ಹಾಗೆಯೇ ಹೊಸದಾಗಿ ಬೆಂಗಳೂರು ಪೂರ್ವ ಭಾಗದಲ್ಲಿ ಸರಕಾರಿ ಹುಡುಗರ ಕಲಾ ಕಾಲೇಜಿನಲ್ಲಿ ತೆರೆದಿರುವ ಆರೈಕೆ ಕೇಂದ್ರದಲ್ಲಿ 200 ಹಾಸಿಗೆ ಹಾಗೂ ಸಾಯಿ ಕಲ್ಯಾಣ ಮಂಟಪದಲ್ಲಿ 125 ಹಾಸಿಗೆಗಳನ್ನು ತೆರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News