ಕೋವಿಡ್ ಕೇಸ್ ಗಳ ದಾಖಲೆ ಏರಿಕೆಯ ನಡುವೆ ಇಂದು ಬಂಗಾಳದಲ್ಲಿ ಕೊನೆಯ ಹಂತದ ಮತದಾನ

Update: 2021-04-29 06:26 GMT

ಹೊಸದಿಲ್ಲಿ: ಪಶ್ಚಿಮಬಂಗಾಳ ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಏರುತ್ತಿರುವಾಗಲೇ ಎಂಟನೇ ಹಾಗೂ ಅಂತಿಮ ಹಂತದ ಮತದಾನವು ಗುರುವಾರ ಬೆಳಗ್ಗೆ ಆರಂಭವಾಗಿದೆ.  ವಿಧಾನಸಭಾ ಚುನಾವಣೆಯು ಮಾಲ್ಡಾ, ಮುರ್ಷಿದಾಬಾದ್, ಬಿರ್ಭು ಹಾಗೂ ಕೋಲ್ಕತಾದ 35 ಸೀಟುಗಳಲ್ಲಿ ನಡೆಯಲಿದೆ.

ಮಾಲ್ಡಾದ 6 ಕ್ಷೇತ್ರಗಳು, ಮುರ್ಷಿದಾಬಾದ್ ಹಾಗೂ ಬಿರ್ಭಮ್ ಜಿಲ್ಲೆಗಳ ತಲಾ 11 ಹಾಗೂ ಕೋಲ್ಕತಾದ 7 ಸೀಟುಗಳಲ್ಲಿ ಚುನಾವಣೆ ನಡೆಯಲಿದೆ. 11,860 ಕೇಂದ್ರಗಳಲ್ಲಿ ಚುನಾವಣೆ ನಡೆಯುವುದು. ಮತದಾರರು ಕಣದಲ್ಲಿರುವ 283 ಅಭ್ಯರ್ಥಿಗಳಲ್ಲಿ ತಮ್ಮ ಇಷ್ಟದವರನ್ನು ಆಯ್ಕೆ ಮಾಡಲಿದ್ದಾರೆ. 35 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇಬ್ಬರು ಸಚಿವರಾದ ಶಶಿ ಪಂಜಿ ಹಾಗೂ ಸಧನ್ ಪಾಂಡೆ ಅವರು 8ನೇ ಹಂತದ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದಾರೆ. ಎಲ್ಲರ ಕಣ್ಣು ಬರ್ಭಮ್ ಜಿಲ್ಲೆಯ ಮೇಲಿದ್ದು, ಇಲ್ಲಿ ಚುನಾವಣಾ ಸಂಬಂಧಿ ಹಿಂಸಾಚಾರ ನಡೆಯುವ ದೊಡ್ಡ ಇತಿಹಾಸವೇ ಇದೆ.

ಕೋವಿಡ್ ಸೋಂಕು ಈ ಹಂತದ ಚುನಾವಣೆಯ ವೇಳೆ ಪರಿಣಾಮಬೀರಿದ್ದು, ಓರ್ವ ಅಭ್ಯರ್ಥಿ ಮೃತಪಟ್ಟಿದ್ದರೆ, ಇನ್ನೋರ್ವ ರೋಗದ ವಿರುದ್ದ ಹೋರಾಡುತ್ತಿದ್ದಾರೆ.

ಮಾಲ್ಡಾದ ಬೈಸಬ್ ನಗರದ ಸ್ವತಂತ್ರ ಅಭ್ಯರ್ಥಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದರು.  ಇಂಗ್ಲೀಷ್ ಬಝಾರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರೂಪಾ ಮಿತ್ರಾ ಚೌಧರಿ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಕೋಲ್ಕತಾದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 17,207 ಹೊಸ ಕೇಸ್  ಗಳು ವರದಿಯಾಗಿದ್ದು, 3,821 ಕೇಸ್ ಗಳು ಕೋಲ್ಕತಾದಲ್ಲೇ ವರದಿಯಾಗಿದೆ. 77 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ.
ಪಶ್ಚಿಮಬಂಗಾಳದ ಚುನಾವಣೆಯ ಮತ ಎಣಿಕೆ ಮೇ 2ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News