80ಕ್ಕಿಂತಲೂ ಹೆಚ್ಚಿನ ದೇಶಗಳ ಜೊತೆ ಭಾರತದ ಕೊರೋನ ಲಸಿಕೆ ಹಂಚಿಕೆ: ವಿಶ್ವಸಂಸ್ಥೆಯಲ್ಲಿ ಭಾರತ

Update: 2021-04-29 16:22 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಎ. 29: ಹಲವು ನಿರ್ಬಂಧಗಳು ಮತ್ತು ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಲಸಿಕೆ ಹಂಚಿಕೆಗೆ ಸಂಬಂಧಿಸಿ ತಾನು ನೀಡಿರುವ ವಾಗ್ದಾನವನ್ನು ಈಡೇರಿಸಲು ಭಾರತ ಯತ್ನಿಸಿದೆ ಹಾಗೂ 80ಕ್ಕಿಂತಲೂ ಅಧಿಕ ದೇಶಗಳೊಂದಿಗೆ ಕೋವಿಡ್-19 ಲಸಿಕೆಗಳನ್ನು ಹಂಚಿಕೊಂಡಿದೆ ಎಂದು ವಿಶ್ವಸಂಸ್ಥೆಗೆ ತಿಳಿಸಿದೆ.

ವಿಶ್ವಸಂಸ್ಥೆ ಮಾಡುವ ಕೆಲಸಗಳ ಬಗ್ಗೆ ಜಗತ್ತಿನಾದ್ಯಂತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ಜಾಗತಿಕ ಸಂಪರ್ಕ ಇಲಾಖೆಯು ಎಲ್ಲ ದೇಶಗಳ ಲಸಿಕೆಗಳ ಡೋಸ್‌ಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುವಂತೆ ಸಕ್ರಿಯವಾಗಿ ಪ್ರೋತ್ಸಾಹಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ದೂತಾವಾಸದ ಸಲಹೆಗಾರ ಎ. ಅಮರ್‌ನಾಥ್ ವಿಶ್ವಸಂಸ್ಥೆ ಮಹಾಸಭೆಯ ಮಾಹಿತಿ ಕುರಿತ ಸಮಿತಿಯ 43ನೇ ಅಧಿವೇಶನದಲ್ಲಿ ಹೇಳಿದರು.

ನಾವು 80ಕ್ಕಿಂತಲೂ ಅಧಿಕ ದೇಶಗಳೊಂದಿಗೆ ಲಸಿಕೆಗಳನ್ನು ಹಂಚಿಕೊಂಡಿದ್ದೇವೆ ಹಾಗೂ ಜೀವ ಉಳಿಸುವ ಔಷಧಿಗಳು ಮತ್ತು ಸಲಕರಣೆಗಳನ್ನು 150ಕ್ಕೂ ಅಧಿಕ ದೇಶಗಳಿಗೆ ಒದಗಿಸಿದ್ದೇವೆ. ಈ ಸಾಂಕ್ರಾಮಿಕದಿಂದ ನಾವೆಲ್ಲರೂ, ಎಲ್ಲ ಸ್ಥಳಗಳಲ್ಲೂ ಸುರಕ್ಷಿತವಾಗಿ ಹೊರಬರದಿದ್ದರೆ ಅದನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದು ನಮ್ಮ ನಿಲುವಾಗಿದೆ ಎಂದು ಅಮರ್‌ನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News