ಕೋವಿಡ್ ಪೀಡಿತ ಭಾರತದಿಂದ ಪ್ರಯಾಣವನ್ನು ನಿಷೇಧಿಸಿದ ಅಮೆರಿಕ

Update: 2021-05-01 07:50 GMT

ವಾಷಿಂಗ್ಟನ್: ಅಧ್ಯಕ್ಷ ಜೋ ಬೈಡನ್ ಭಾರತದಿಂದ ಅಮೆರಿಕಕ್ಕೆ ಪ್ರಯಾಣ ನಿಷೇಧ ಘೋಷಿಸಿದ್ದು, ಕೆಲವು ವರ್ಗದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು ಹಾಗೂ ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್‍ಮೆಂಟ್ ತಿಳಿಸಿದೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಭಾರೀ ಏರಿಕೆ, ಬಹು ರೂಪಾಂತರ ವೈರಸ್ ಹಿನ್ನೆಲೆಯಲ್ಲಿ ಮೇ 4ರಿಂದ ಭಾರತದಿಂದ ಪ್ರಯಾಣವನ್ನು ನಿರ್ಬಂಧಿಸುವ ಘೋಷಣೆಯನ್ನು ಜೋ ಬೈಡನ್ ಹೊರಡಿಸಿದ ಕೆಲವೇ ಗಂಟೆಗಳ ನಂತರ ರಾಜ್ಯ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರು ಈ ವಿನಾಯಿತಿಗಳನ್ನು ನೀಡಿದ್ದಾರೆ.

ಪ್ರಯಾಣ ನಿಷೇಧ ವಿನಾಯಿತಿಯು ಬ್ರೆಝಿಲ್,ಚೀನಾ, ಇರಾನ್ ಅಥವಾ ದಕ್ಷಿಣ ಆಫ್ರಿಕಾದ ಕೆಲವು ವರ್ಗದ ಪ್ರಯಾಣಿಕರಿಗೆ ಅಮೆರಿಕ ನೀಡಿರುವ ವಿನಾಯಿತಿಗೆ ಅನುಗುಣವಾಗಿದೆ.

ಭಾರತ, ಬ್ರೆಝಿಲ್, ಚೀನಾ, ಇರಾನ್ ಅಥವಾ ದ.ಆಫ್ರಿಕಾದಲ್ಲಿ ಹಾಜರಿದ್ದ ಅರ್ಹ ಅರ್ಜಿದಾರರು ಇದರಲ್ಲಿ ಸೇರಿದ್ದಾರೆ ಎಂದು ಅದು ಹೇಳಿದೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News