"ದಿಲ್ಲಿ, ಗುಜರಾತ್,ಮಹಾರಾಷ್ಟ್ರದಲ್ಲಿ ಕೋವಿಡ್ ದೈನಂದಿನ ಪ್ರಕರಣದ ಇಳಿಕೆಯ ಆರಂಭಿಕ ಲಕ್ಷಣವಿದೆ"

Update: 2021-05-03 13:05 GMT

ಹೊಸದಿಲ್ಲಿ: ದಿಲ್ಲಿ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳು ಕೋವಿಡ್ -19 ರ ದೈನಂದಿನ ಪ್ರಕರಣಗಳಲ್ಲಿ ಇಳಿಕೆಯ ಆರಂಭಿಕ ಲಕ್ಷಣಗಳನ್ನು ತೋರಿಸುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.  ಈ ರಾಜ್ಯಗಳಲ್ಲಿ  ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.ಈ ಹಿಂದೆ ಈ ರಾಜ್ಯಗಳು ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳವನ್ನು ದಾಖಲಿಸಿದ್ದವು. ಆದಾಗ್ಯೂ, ಇವುಗಳನ್ನು ವಿಶ್ಲೇಷಿಸಲು ಇದೆಲ್ಲವೂ ಆರಂಭಿಕ ಸಂಕೇತಗಳು ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

ಚೇತರಿಕೆಯಲ್ಲೂ ಸಕಾರಾತ್ಮಕತೆ ಯನ್ನು ಕಾಣಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇ 2 ರಂದು ಚೇತರಿಕೆ ಪ್ರಮಾಣವು ಶೇಕಡಾ 78 ರಷ್ಟಿದ್ದು, ಇದು ಮೇ 3 ರಂದು ಸುಮಾರು 82 ಪ್ರತಿಶತದಷ್ಟು ಏರಿದೆ ಎಂದು ಅವರು ಹೇಳಿದರು. ಇವುಗಳು ಆರಂಭಿಕ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಸರಕಾರವು ನಿಯಮಿತವಾಗಿ ಕೆಲಸ ಮಾಡಬೇಕಾಗಿದೆ ಎಂದು  ಅಗರ್ವಾಲ್ ಗಮನಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News